ಬೆಂಗಳೂರು: ಟ್ಯಾಕ್ಸಿ ಪ್ರಯಾಣ ದರ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ವಾಹನಗಳನ್ನ ನಾಲ್ಕು ವಿಭಾಗಗಳನ್ನಾಗಿ ಸರ್ಕಾರ ವಿಂಗಡಿಸಿದೆ. ಇಂಧನ ಬೆಲೆ ಹೆಚ್ಚಳ ಹಿನ್ನೆಲೆ ಸರ್ಕಾರ ದರ ಏರಿಕೆಯಾಗಿದ್ದು, ಟ್ಯಾಕ್ಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅಗ್ರಿಗೇಟರ್ಸ್ ನಿಯಮದಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಬೆಲೆ ಏರಿಕೆ ನಿಯಮ ಅನ್ವಯವಾಗಲಿದೆ.
1. ಡಿ ವರ್ಗ – 5 ಲಕ್ಷ ಮೌಲ್ಯದೊಳಗಿನ ವಾಹನಗಳು – ಕನಿಷ್ಠ ನಾಲ್ಕು ಕಿಲೋ ಮೀಟರ್ ಗೆ ರೂ.75 – ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಠ 18 ರೂ ಮತ್ತು ಗರಿಷ್ಠ 36 ರೂ.
2. ಸಿ ವರ್ಗ – 5 ರಿಂದ 10 ಲಕ್ಷ ಮೌಲ್ಯದೊಳಗಿನ ವಾಹನಗಳು – ಕನಿಷ್ಠ ನಾಲ್ಕು ಕಿಲೋ ಮೀಟರ್ ಗೆ 100 ರೂ. – ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಠ 21 ರೂ ಮತ್ತು ಗರಿಷ್ಠ 42 ರೂ.
3. ಬಿ ವರ್ಗ – 10 ರಿಂದ 16 ಲಕ್ಷ ಮೌಲ್ಯದೊಳಗಿನ ವಾಹನಗಳು- ಕನಿಷ್ಠ ನಾಲ್ಕು ಕಿಲೋ ಮೀಟರ್ ಗೆ ರೂ. 120 – ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಠ 24 ರೂ ಮತ್ತು ಗರಿಷ್ಠ 48 ರೂ.
4. ಎ ವರ್ಗ – 16 ಲಕ್ಷ ಮೇಲ್ಪಟ ವಾಹನಗಳು – ಕನಿಷ್ಠ ನಾಲ್ಕು ಕಿಲೋ ಮೀಟರ್ ಗೆ 150 ರೂ. – ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಠ 27 ರೂ ಮತ್ತು ಗರಿಷ್ಠ 54 ರೂ.
ಪ್ರವರ್ತಕರು ಪಾವತಿಸಬೇಕಾಗಿರುವ ಜಿಎಸ್‍ಟಿ ಮತ್ತು ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮಯದ ಆಧಾರದಲ್ಲಿ ದರಗಳನ್ನು ವಸೂಲಿ ಮಾಡಬಾರದು. ಸರ್ಕಾರದಿಂದ ಕಿ.ಮೀ. ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನ ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು.
ಕಾಯುವಿಕೆ ದರಗಳನ್ನ ಮೊದಲಿನ 20 ನಿಮಿಷಗಳವರೆಗೆ ಉಚಿತವಾಗಿ, ನಂತರ ಪ್ರತಿ 15 ನಿಮಿಷಗಳಿಗೆ ಮತ್ತು ಅದರ ಭಾಗಕ್ಕೆ ರೂ.10 ರಂತೆ ನಿಗದಿಪಡಿಸಲಾಗಿದೆ. ಸರ್ಕಾರದಿಂದ ಕಿ.ಮೀ. ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡಯತಕ್ಕದಲ್ಲ.