– 100 ಮೀ.ಗೂ ಹೆಚ್ಚು ಸರದಿ ನಿಂತರೆ ಶುಲ್ಕ ಪಾವತಿಸುವಂತಿಲ್ಲ
– ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನಗಳಿಗೆ ಮಾತ್ರ ಅನ್ವಯ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನದಟ್ಟಣೆಯ ಸಮಯ ಸೇರಿ ಎಲ್ಲ ಸಮಯದಲ್ಲೂ ಪ್ರತಿ ವಾಹನದ ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರದಿರುವುದನ್ನು ಖಾತರಿಪಡಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ತಿಳಿಸಿದೆ.
Advertisement
ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುವ ಪ್ರಾಧಿಕಾರ, ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರುವಂತಿಲ್ಲ. ಅಲ್ಲದೆ ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಗಿಂತ ಹೆಚ್ಚು ವಾಹನಗಳ ಸರದಿ ನಿಲ್ಲಲು ಅವಕಾಶವಿಲ್ಲ. ಒಂದು ವೇಳೆ ಯಾವುದಾದರು ಕಾರಣಕ್ಕೆ ಕಾಯುತ್ತಿರುವ ವಾಹನಗಳ ಸರದಿ 100 ಮೀಟರ್ ಗಿಂತ ಹೆಚ್ಚಾದರೆ ಟೋಲ್ ಬೂತ್ ಗಳಲ್ಲಿ ವಾಹನಗಳ ಸರದಿ 100 ಮೀಟರ್ ಒಳಗಿನ ವಾಹನಗಳು ಟೋಲ್ ಪಾವತಿಸದೆ ಸಂಚರಿಸಬಹುದು.
Advertisement
ಟೋಲ್ ಬೂತ್ ನಲ್ಲಿ ಪ್ರತಿಯೊಂದು ಟೋಲ್ ಮಾರ್ಗದಲ್ಲಿ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಹಾಕಲಾಗುತ್ತದೆ. ಒಂದು ವೇಳೆ 100 ಮೀಟರ್‍ಗೂ ಅಧಿಕ ಸರದಿ ನಿಂತರೆ ಈ ಹಳದಿ ಪಟ್ಟಿ ಒಳಗಿನ ವಾಹನಗಳು ಟೋಲ್ ಪಾವತಿಸದೇ ಉಚಿತವಾಗಿ ಸಂಚರಿಸಬಹುದಾಗಿದೆ. ಇದು ಫಾಸ್ಟ್ಯಾಗ್ ಅಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಫಾಸ್ಟ್ಯಾಗ್ ಅಳವಡಿಸದ ವಾಹನಗಳಿಗೆ ವೇಟಿಂಗ್ ಪಿರಿಯಡ್ ನಿಯಮ ಅನ್ವಯವಾಗುವುದಿಲ್ಲ ಎಂದು ಎನ್‍ಎಚ್‍ಎಐ ಸ್ಪಷ್ಟಪಡಿಸಿದೆ.
Advertisement
Advertisement
2021ರ ಫೆಬ್ರವರಿ ಮಧ್ಯದಿಂದೀಚೆಗೆ ಟೋಲ್ ಪ್ಲಾಜಾಗಳನ್ನು ಎನ್‍ಎಚ್‍ಎಐ ಶೇ.100ರಷ್ಟು ನಗದುರಹಿತ ವಹಿವಾಟನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಎನ್‍ಎಚ್‍ಎಐ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಪ್ರಮಾಣ ಶೇ.96ರಷ್ಟು ಮತ್ತು ಹಲವು ಪ್ಲಾಜಾಗಳಲ್ಲಿ ಶೇ.99ರಷ್ಟಿದೆ. ದೇಶದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಹೊಸ ವಿನ್ಯಾಸ ಟೋಲ್ ಫ್ಲಾಜಾಗಳನ್ನು ಹೊಂದಲು ಹಾಗೂ ಮುಂದಿನ ಹತ್ತು ವರ್ಷಗಳ ವಾಹನಗಳ ಅಂದಾಜು ಮಾಡಿ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಪರಿಣಾಮಕಾರಿ ಟೋಲ್ ಸಂಗ್ರಹ ವ್ಯವಸ್ಥೆಗೆ ಒತ್ತು ನೀಡಲಾಗಿದೆ.