ಟೋಕಿಯೋ: 2021ರ ಕ್ರೀಡಾ ಜಾತ್ರೆ ಟೋಕಿಯೋ ಒಲಿಂಪಿಕ್ಸ್ ಸರಳವಾಗಿ ಇಂದು ಉದ್ಘಾಟನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ 20 ಮಂದಿ ಅಥ್ಲೀಟ್ಸ್ ಗಳು ಭಾಗವಹಿಸಿದರು. 21ನೇ ಕ್ರಮಾಂಕದಲ್ಲಿ ಭಾರತ ತಂಡ ತ್ರಿವರ್ಣ ಧ್ವಜ ಹಿಡಿದು ಪಥಸಂಚಲನದಲ್ಲಿ ಭಾಗವಹಿಸಿತು.
ಜಪಾನ್‍ನ ಟೋಕಿಯೋದಲ್ಲಿ 2020ರಲ್ಲಿ ನಡೆಯ ಬೇಕಾಗಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಕೊರೊನಾದಿಂದಾಗಿ ಒಂದು ವರ್ಷದ ಬಳಿಕ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡು ಆರಂಭಗೊಂಡಿದೆ. ಉದ್ಘಾಟನ ಸಮಾರಂಭದ ಪಥಸಂಚಲನದಲ್ಲಿ ಭಾರತ 20 ಮಂದಿ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಹಾಕಿ ತಂಡದ ನಾಯಕ ಮನ್‍ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಮೇರಿ ಕೋಮ್ ಭಾರತ ತ್ರಿವರ್ಣ ಧ್ವಜ ಹಿಡಿದು ಜಪಾನ್‍ನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಹೆಜ್ಜೆ ಇಟ್ಟರು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು
Here they are ????#TeamIndia at the #OpeningCeremony of #Tokyo2020 #Olympics pic.twitter.com/8K49eWliqF
— Doordarshan Sports (@ddsportschannel) July 23, 2021
ಜಪಾನಿನ ವರ್ಣಮಾಲೆಯ ಅಕ್ಷರದ ಕ್ರಮದಂತೆ ರಾಷ್ಟ್ರಗಳ ಪಥಸಂಚಲನ ನಡೆಯಿತು. ಈ ಪ್ರಕಾರ ಭಾರತಕ್ಕೆ ವರ್ಣಮಾಲೆಯ 21 ಅಕ್ಷರವಾಗಿ ಗಮನ ಸೆಳೆಯಿತು. ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆರಂಭಕಂಡ ಒಲಿಂಪಿಕ್ಸ್ ನಲ್ಲಿ ಕೆಲ ಸಣ್ಣ ಪುಟ್ಟ ಕಾರ್ಯಕ್ರಮಗಳು ನಡೆಯಿತು. ಒಲಿಂಪಿಕ್ಸ್ ರಿಂಗ್‍ನಲ್ಲಿ ನೃತ್ಯ, ಲೈಟಿಂಗ್ ಕಲರವ ಸೆರಿದಂತೆ ಕೆಲ ಅಚ್ಚುಕಟ್ಟಾದ ಕಾರ್ಯಕ್ರಮಗಳು ನೋಡುಗರ ಗಮನಸೆಳೆಯಿತು.