ಟೋಕಿಯೋ: ವಿಶ್ವದ ಕ್ರೀಡಾ ಹಬ್ಬ ಒಲಿಂಪಿಕ್ಸ್ ಈ ಬಾರಿ ಜಪಾನ್‍ನ ಟೋಕಿಯೋದಲ್ಲಿ ನಡೆಯುತ್ತಿದೆ. ಇಲ್ಲಿ ಭಾರತದ ದಂಪತಿ ಸಹಿತ ಕೆಲ ಜೋಡಿಗಳು ಸ್ಪರ್ಧಿಗಳಾಗಿ ತಮ್ಮ ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
Advertisement
ಒಲಿಂಪಿಕ್ಸ್ ನಲ್ಲಿ ತಮ್ಮ ದೇಶಕ್ಕಾಗಿ ಪದಕ ಬೇಟೆಗೆ ಸಿದ್ಧವಾಗಿರುವ ಕ್ರೀಡಾಪಟುಗಳಲ್ಲಿ ಕೆಲ ದಂಪತಿ ಒಟ್ಟಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಮದುವೆ ಆಗಿದ್ದರೆ, ಕೆಲವರು ಡೆಟಿಂಗ್‍ನಲ್ಲಿದ್ದಾರೆ. ಕೆಲವರು ಎಂಗೆಂಜ್ ಆದವರು ಕೂಡ ಇದ್ದಾರೆ.
Advertisement
Advertisement
ಟೋಕಿಯೋ ಒಲಿಂಪಿಕ್ಸ್ ಭಾಗವಹಿಸಿದ ಭಾರತದ ಹೆಮ್ಮೆಯ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನುದಾಸ್ ಮೊದಲನೇ ಜೋಡಿ ಹಕ್ಕಿ ಇವರು ಒಲಿಂಪಿಕ್ಸ್ ಭಾಗವಹಿಸುವ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದರು. ಇದೀಗ ಒಟ್ಟಿಗೆ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ: ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಅಚ್ಚರಿ- ಫೈನಲ್‍ಗೆ ಲಗ್ಗೆ
Advertisement
ಎರಡನೇ ಜೋಡಿ ಅಮೆರಿಕದ ತಾರಾ ಡೇವಿಸ್ ಮತ್ತು ಹಂಟರ್ ವುಡ್ಹಾಲ್ ಆಗಿದ್ದು, ಇವರಿಬ್ಬರೂ ಕೂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಬ್ಬರೂ ಕೂಡ ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.
ಮೂರನೇ ಜೋಡಿ ಇಂಗ್ಲೆಂಡ್‍ನ ಲಾರಾ ಮತ್ತು ಜೇಸನ್ ಕೆನ್ನಿ ಇವರಿಬ್ಬರು ಕೂಡ ತಮ್ಮ ದೇಶದ ಪರವಾಗಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಯಾಗಿ ಸ್ಪರ್ಧಿಸುವ ದಂಪತಿ ಈ ಹಿಂದಿನ ಕ್ರೀಡಾಕೂಟಗಳಲ್ಲಿ ಹತ್ತಕ್ಕೂ ಹೆಚ್ಚು ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಸ್ಯಾಂಡಿ ಮೋರಿಸ್ ಅಮೆರಿಕ ಪರ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ಸ್ಪರ್ಧಿಸಿದರೆ, ಗಂಡ ಟೈರೋನ್ ಸ್ಮಿತ್ ಅಮೆರಿಕ ಪರ ಲಾಂಕ್ ಜಂಪ್ ಸ್ಪರ್ಧಿಯಾಗಿದ್ದಾರೆ. ಇವರಿಬ್ಬರೂ ಕೂಡ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಒಲಿಂಪಿಕ್ಸ್‍ನಲ್ಲಿ ತಮ್ಮ ದೇಶದ ಪರ ಆಡುತ್ತಿದ್ದಾರೆ.
ಷಾರ್ಲೆಟ್ ಕಾಸ್ಲಿಕ್ ಮತ್ತು ಲೂಯಿಸ್ ಹಾಲೆಂಡ್ ಆಸ್ಟ್ರೇಲಿಯಾದ ಜೋಡಿ ಹಕ್ಕಿಗಳಾಗಿದ್ದು, ಇವರಿಬ್ಬರು ಕೂಡ ಆಸ್ಟ್ರೇಲಿಯಾದ ಪುರುಷ ಮತ್ತು ಮಹಿಳಾ ತಂಡದ ರಗ್ಬಿ ತಂಡದಲ್ಲಿದ್ದಾರೆ. ಕಳೆದ ವರ್ಷ ಇವರಿಬ್ಬರಿಗೆ ಮದುವೆ ನಿಶ್ಚಯವಾಗಿತ್ತು. ಆ ಬಳಿಕ ಕೋವಿಡ್‍ನಿಂದಾಗಿ ಮುಂದೂಡಲ್ಪಟ್ಟಿತ್ತು.
ಗರೆಕ್ ಮೈನ್‍ಹಾರ್ಡ್ ಮತ್ತು ಲೀ ಕೀಫರ್ ದಂಪತಿ ಅಮೆರಿಕ ಪರ ಫೆನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಪದಕ ಗೆಲ್ಲುವ ನೆಚ್ಚಿನ ಜೋಡಿಯಲ್ಲಿ ಒಂದಾಗಿದೆ. ತಮ್ಮ ತಮ್ಮ ದೇಶಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಈ ಜೋಡಿ ಹಕ್ಕಿಗಳು ಆಟದೊಂದಿಗೆ ಟೋಕಿಯೋದಲ್ಲಿ ಕಂಗೊಳಿಸುತ್ತಿದ್ದು, ಯಾವ ಜೋಡಿ ಪದಕಗಳಿಗೆ ಕೊರಳೊಡ್ಡಿ ಸಿಹಿ ಅನುಭವಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.