ಚಿಕ್ಕಬಳ್ಳಾಪುರ: ರೈತರು ಹಾಗೂ ವರ್ತಕರ ನಡುವೆ ಚಿಂತಾಮಣಿ ನಗರದ ಎಪಿಎಂಸಿ ಯಾರ್ಡ್‍ನಲ್ಲಿ ಟೊಮೆಟೋ ವಿಚಾರವಾಗಿ ಮಾರ್ಕೆಟ್‍ನಲ್ಲಿ ಗಲಾಟೆ ನಡೆದಿದೆ. ಇದನ್ನೂ ಓದಿ: ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು
Advertisement
ಪ್ರತಿದಿನ ಚಿಂತಾಮಣಿ ಟೊಮೆಟೋ ಮಾರ್ಕೆಟ್‍ಗೆ ರಾಶಿರಾಶಿ ಲೋಢ್ ಗಟ್ಟಲೇ ಬರುತ್ತಿದೆ. ಟೊಮೆಟೋ ಮಾರ್ಕೆಟ್‍ನಲ್ಲಿ ಜಾಗ ಸಾಕಾಗುತ್ತಿಲ್ಲ. ಹೀಗಾಗಿ ಮಾರ್ಕೆಟ್‍ನ ದಿನಸಿ ಅಕ್ಕಿ ಬೆಳೆ ಅಂಗಡಿಗಳ ಮಾರ್ಕೆಟ್ ಬಳಿ ಸಹ ಟೊಮೆಟೋ ತುಂಬಿಕೊಂಡು ಬಂದ ವಾಹನಗಳನ್ನು ಪಾಕಿರ್ಂಗ್ ಮಾಡಿ ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ದಿನಸಿ ಅಂಗಡಿಗಳ ಮುಂದೆ ನಿಲ್ಲಿಸಿಕೊಂಡು ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಟೊಮೆಟೋ ಶಿಫ್ಟ್ ಮಾಡಲಾಗುತ್ತಿದೆ. ಹೀಗಾಗಿ ಅಕ್ಕಿ-ಬೇಳೆ ಇತರೆ ದವಸಧಾನ್ಯಗಳ ಗೋದಾಮುಗಳ ವರ್ತಕರು ತಮ್ಮ ವ್ಯಾಪಾರ ವಹಿವಾಟಿಗೆ ಅಡ್ಡಿ ಆಗುತ್ತೆ ಅಂತ ಆಕ್ಷೇಪ ವ್ಯಕ್ತಪಡಿಸಿ ತಕರಾರು ತೆಗೆದಿದ್ದಾರೆ.
Advertisement
Advertisement
ಈ ವಿಚಾರವಾಗಿ ರೈತರು ದವಸಧಾನ್ಯ ಗೋದಾಮುಗಳ ವರ್ತಕರ ನಡುವೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತವೂ ತಲುಪಿದೆ. ಕೂಡಲೇ ಮಧ್ಯ ಪ್ರವೇಶ ಮಾಡಿರೋ ಎಪಿಎಂಸಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ನಿರತರಾಗಿದ್ದಾರೆ. ಟೊಮೆಟೋ ಮಾರ್ಕೆಟ್‍ನಲ್ಲಿ ವ್ಯಾಪಾರ ವಹಿವಾಟಿಗೆ ಜಾಗದ ಕೊರತೆ ಎದುರಾಗಿರೋದು ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಟೊಮೆಟೋ ಮಾರ್ಕೆಟ್ ಬೇರೆ ಕಡೆ ಶಿಫ್ಟ್ ಮಾಡಿ ಅಥವಾ ಬೇರೆ ಮಾರುಕಟ್ಟೆ ವ್ಯವಸ್ಥೆ ಮಾಡುವಂತೆ ರೈತರು ವರ್ತಕರು ಆಗ್ರಹಿಸಿದ್ದಾರೆ.
Advertisement