ಚೆನ್ನೈ: ಟೈಲ್ಸ್ ಮತ್ತು ಸ್ಯಾನಿಟರಿವೇರ್ ತಯಾರಿಸುತ್ತಿದ್ದ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ 220 ಕೋಟಿ ರೂ ಕಪ್ಪು ಹಣ ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.
Advertisement
ಫೆಬ್ರವರಿ 26ರಂದು ತಮಿಳುನಾಡು, ಗುಜರಾತ್ ಕೋಲ್ಕತ್ತಾ ಸೇರಿದಂತೆ ಒಟ್ಟು 20 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಟೈಲ್ಸ್ ಮತ್ತು ಸ್ಯಾನಿಟರಿವೇರ್ ತಯಾರಿಸಿ ವ್ಯಾಪಾರ ಮಾಡುತ್ತಿದ್ದ ಸಂಸ್ಥೆಯ ಮೇಲೆ ದಾಳಿ ನಡೆಸಲಾಗಿದ್ದು, 8.30 ಕೋಟಿ ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿಕೆ ನೀಡಿದೆ.
Advertisement
ದಾಳಿ ವೇಳೆ ರಹಸ್ಯ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಪುಸ್ತಕದಲ್ಲಿ ಮಾರಾಟ ಮತ್ತು ಖರೀದಿಸಿರುವ ಲೆಕ್ಕದ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ವೇಳೆ ಶೇ.50 ರಷ್ಟು ಅಕ್ರಮ ವಹಿವಾಟು ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಹಿಂದಿನ ಲೆಕ್ಕಗಳನ್ನು ಪರಿಶೀಲಿಸಿದಾಗ 120 ಕೋಟಿ ರೂ. ಆದಾಯ ತೋರಿಸುತ್ತಿದ್ದು, ಹೊರಗೆ ನಡೆದ ವಹಿವಾಟಿನಲ್ಲಿ ಬಂದ 100 ಕೋಟಿ ಆದಾಯವನ್ನು ಮರೆಮಾಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಒಟ್ಟಾರೆ 220 ಕೋಟಿ ರೂ.ವನ್ನು ಶನಿವಾರ ರಾತ್ರಿ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಲೆಕ್ಕವಿಲ್ಲದೇ ತಮಿಳಿನಾಡಿನಿಂದ ಪುದುಚೇರಿಗೆ ನಡುಯುತ್ತಿದ್ದ ವಹಿವಾಟುಗಳನ್ನು ಪತ್ತೆ ಹಚ್ಚಲು ಕೇಂದ್ರೀಯ ನೇರ ತೆರಿಗೆ ಮಂಡಳಿ ಈಗ ತನಿಖೆ ನಡೆಸಲು ಮುಂದಾಗಿದೆ.