ಲಾಕ್ಡೌನ್ ಇರುವುದರಿಂದ ಮನೆಯಲ್ಲಿಯೆ ಇರುತ್ತಿರಾ. ವಿಕೇಂಡ್ ಆಗಿರುವುದರಿಂದ ರುಚಿಯಾಗಿ ಏನಾದರೂ ತಿನ್ನಬೇಕು ಎಂದು ನಾಲಿಗೆ ಬಯಸುತ್ತದೆ. ಹೊರಗಡೆ ಹೋಟೆಲ್ ಹೋಗಿ ಲಾಕ್ಡೌನ್ ಸಮಯದಲ್ಲಿ ಪಾರ್ಸಲ್ ತರಲು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿಯೇ ಟೇಸ್ಟಿ ಟೇಸ್ಟಿ ನಾಟಿ ಸ್ಟೈಲ್ ಚಿಕನ್ ಗ್ರೇವಿ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್ – ಅರ್ಧ ಕೇಜಿ
* ಅರಿಶಿನ – 1 ಟೀ ಸ್ಪೂನ್
* ಅಚ್ಚ ಖಾರದ ಪುಡಿ- 2 ಟೀ ಸ್ಪೂನ್
* ಜೀರಿಗೆ ಪೌಡರ್- 1 ಟೀ ಸ್ಪೂನ್
* ದನಿಯಾ ಪೌಡರ್ – 1 ಸ್ಪೂನ್
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
* ಮೊಸರು – 1/4 ಕಪ್
* ಗರಂಮಸಾಲಾ – ಅರ್ಧ ಸ್ಪೂನ್
* ಕಾಳುಮೆಣಸಿನ ಪೌಡರ್ – 2 ಟೀ ಸ್ಪೂನ್
* ಈರುಳ್ಳಿ 1
* ಕರಿಬೇವು – 5 ರಿಂದ 6 ಎಲೆ
* ಟೊಮೆಟೋ – 2
* ಅಡುಗೆ ಎಣ್ಣೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ :
Advertisement
* ಚಿಕನ್ ಅನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಹಾಕಿಟ್ಟಿರಬೇಕು.
* ಚಿಕನ್ ಇರುವ ಪಾತ್ರೆಗೆ ಅರಿಶಿನ, ಅಚ್ಚ ಖಾರದಪುಡಿ, ಜೀರಿಗೆ ಪೌಡರ್, ದನಿಯಾ ಪೌಡರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು, ಗರಂಮಸಾಲಾ, ಕಾಳುಮೆಣಸಿನ ಪೌಡರ್ ಹಾಕಿ ಚೆನ್ನಾಗಿ ಮಸಾಲೆಯೊಂದಿಗೆ ಚಿಕನ್ ಮಿಶ್ರಣಮಾಡಿ 10 ನಿಮಿಷಗಳ ಕಾಲ ಪ್ರೀಜ್ನಲ್ಲಿಟ್ಟರಬಹುದು ಅಥವಾ ಹಾಗೇ ಇಟ್ಟಿರಬಹುದು.
Advertisement
* ನಂತರ ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಅಡುಗೆ ಎಣ್ಣೆಯನ್ನು ಹಾಕಬೇಕು. ಎಣ್ಣೆ ಬಿಸಿಯಾಗುತ್ತಿದ್ದಂತೆ. ಅದಕ್ಕೆ ಈರುಳ್ಳಿ, ಟೊಮೆಟೊ, ಕರೀಬೇವು ಚೆನ್ನಾಗಿ ಬೇಯಿಸಬೇಕು.
* ನಂತರ ಇದೇ ಕುಕ್ಕರಿಗೆ ಈ ಮೊದಲೇ ತಯಾರಿಸಿಟ್ಟ ಚಿಕನ್ ಮಿಶ್ರಣವನ್ನು ಹಾಕಿ 2 ವಿಶಲ್ ಹಾಕಿಸಿದರೆ ರುಚಿಯಾದ ಟೆಸ್ಟಿ ಟೆಸ್ಟಿ ನಾಟಿ ಸ್ಟೈಲ್ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.