– ಪ್ರಾಣಾಪಾಯದಿಂದ ಪೈಲಟ್ ಪಾರು
ಭೋಪಾಲ್: ತರಬೇತಿ ಲಘು ವಿಮಾನ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಠಾಣಾ ಎಂಬಲ್ಲಿ ಪತನವಾಗಿದೆ. ಚೈಮ್ಸ್ ಏವಿಯೇಷನ್ ಅಕಾಡೆಮಿಗೆ ಸೇರಿದ ಲಘು ವಿಮಾನ ರನ್ ವೇನಿಂದ ಹೊರಗೆ ಲ್ಯಾಂಡ್ ಆಗಿದ್ದರಿಂದ ಈ ಅವಘಡ ಸಂಭವಿಸಿದೆ.
ಓರ್ವ ಪೈಲಟ್ ಸಾಮರ್ಥ್ಯ ಇರೋ ವಿಮಾನ ಇದಾಗಿದ್ದು, ಟ್ರೈನಿ ಇರ್ಶಿಕಾ ಶರ್ಮಾ ಸುರಕ್ಷಿತವಾಗಿದ್ದಾರೆ. ಶನಿವಾರ ಮಧ್ಯಾಹ್ನ ವಿಮಾನ ಟೇಕಾಫ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಟೇಕಾಫ್ ವೇಳೆ ಟ್ರೈನಿಯ ನಿಯಂತ್ರಣ ಕಳೆದುಕೊಂಡಿದ್ದರಿಂದ ರನ್ ನಿಂದ ಹೊರ ಬಂದು ಮುನ್ನುಗಿ ಬಂದು, ತಗ್ಗಿಗೆ ಇಳಿದು ಗಿಡಗಂಟೆಯಲ್ಲಿ ನಿಂತಿದೆ.
ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ವಿಮಾನಕ್ಕೂ ಹೆಚ್ಚಿನ ಹಾನಿ ಆಗಿಲ್ಲ. ಟ್ರೈನಿ ಪೈಲಟ್‍ಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ರನ್ ವೇ ಪಕ್ಕದಲ್ಲಿ ಪೊದೆ, ಗಿಡ-ಗಂಟೆಗಳಲ್ಲಿ ವಿಮಾನ ಸಿಲುಕಿದ್ದರಿಂದಲೇ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: ಎಣ್ಣೆ ಬೇಕು ಎಣ್ಣೆ, ಬಾರ್ ಬಂದ್ ಮಾಡ್ಬೇಡಿ: ಬಿಜೆಪಿ ಮುಖಂಡನ ಪ್ರತಿಭಟನೆ
Just got the news of a crash of a Cessna aircraft (solo flight) that belonged to the Chimes Aviation Academy in Sagar, MP. Fortunately, the trainee is safe. We are rushing an investigation team to the site.
— Jyotiraditya M. Scindia (@JM_Scindia) July 17, 2021
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅವಘಡದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.