ಬೆಂಗಳೂರು: ಬರೋಬ್ಬರಿ 32 ವರ್ಷದ ಬಳಿಕ ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದಲೂ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಟೀಂ ಇಂಡಿಯಾಕ್ಕೆ ಶುಭ ಕೋರಿದ್ದಾರೆ.
We are all overjoyed at the success of the Indian Cricket Team in Australia. Their remarkable energy and passion was visible throughout. So was their stellar intent, remarkable grit and determination. Congratulations to the team! Best wishes for your future endeavours.
— Narendra Modi (@narendramodi) January 19, 2021
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ, ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡ ಯಶಸ್ಸು ಸಾಧಿಸಿದ್ದು, ಇದರಿಂದ ಇಂದು ನಾವೆಲ್ಲರೂ ಖುಷಿಪಟ್ಟಿದ್ದೇವೆ. ಅವರ ಗಮನಾರ್ಹ ಶಕ್ತಿ ಮತ್ತು ಉತ್ಸಾಹವು ಉದ್ದಕ್ಕೂ ಗೋಚರಿಸಿತು. ಟೀಂ ಇಂಡಿಯಾ ತಂಡಕ್ಕೆ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
Advertisement
Historic victory for Team India!????????
Congratulations to the Indian Cricket team for winning the 4th Cricket Test in Brisbane and the Series against Australia! #INDvsAUS pic.twitter.com/CX1wG67B5V
— B.S.Yediyurappa (@BSYBJP) January 19, 2021
Advertisement
ಇತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಟ್ವೀಟ್ ಮಾಡಿ, ಬ್ರಿಸ್ಬೇನ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: 32 ವರ್ಷದ ಬಳಿಕ ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾಗೆ ಮೊದಲ ಸೋಲು..!
Advertisement
ಒಟ್ಟಿನಲ್ಲಿ ಟೀ ಇಂಡಿಯಾ ಐತಿಹಾಸಿಕ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕ್ರಿಕೆಟಿಗರು, ಗಣ್ಯರು ಸೇರಿದಂತೆ ಹಲವಾರು ಮಂದಿ ಟೀಂ ಇಂಡಿಯಾಗೆ ಶುಭ ಹಾರೈಸುತ್ತಿದ್ದಾರೆ. ಇತ್ತ ಕ್ರಿಕೆಟಿಗರು ಕೂಡ ಗೆಲುವಿನ ಸಂಭ್ರಮದಲ್ಲಿದ್ದಾರೆ.
For all of us in ???????? & across the world, if you ever score 36 or lesser in life, remember: it isn't end of the world.
The spring stretches backward only to propel you forward. And once you succeed, don't forget to celebrate with those who stood by you when the world wrote you off. pic.twitter.com/qqaTTAg9uW
— Sachin Tendulkar (@sachin_rt) January 19, 2021