ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ಮರಳಲು ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ವೈರಸ್‍ನಿಂದಾಗಿ ಮಾರ್ಚ್ ನಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಇದು ಟೆಸ್ಟ್‌ಗೆ ಪ್ರವೇಶಿಸುವುದು ಬೌಲರ್‌ಗಳಿಗೆ ಅತ್ಯಂತ ಸವಾಲಿನ ಸಂಗತಿಯಾಗಿದೆ.
ಐಸಿಸಿ ಮಾರ್ಗಸೂಚಿಗಳ ಪ್ರಕಾರ, ಟೆಸ್ಟ್ ಪಂದ್ಯವನ್ನು ಆಡುವ ಮೊದಲು ಬೌಲರ್‌ಗಳಿಗೆ 2-3 ತಿಂಗಳ ತರಬೇತಿ ಅಗತ್ಯವಿದೆ. ಇದು ಬೌಲರ್‌ಗಳ ವಯಸ್ಸು, ಹಳೆಯ ಗಾಯ, ತಂತ್ರ ಮತ್ತು ವೇಗವನ್ನು ಅವಲಂಬಿಸಿರುತ್ತದೆ.
Advertisement
Advertisement
ಬೌಲರ್‌ಗಳು ಅವಸರದಲ್ಲಿ ಮೈದಾನಕ್ಕಿಳಿದರೆ ಗಾಯದ ಅಪಾಯ ಹೆಚ್ಚಾಗುತ್ತದೆ. 7 ವಾರಗಳ ಕಾಲ ವಿಶ್ರಾಂತಿ ಪಡೆಯುವುದರಿಂದ ಬೆನ್ನುಮೂಳೆಯಲ್ಲಿ ಶೇ.2 ಮೂಳೆ ನೋವು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನ ಸೂಚಿಸಿದೆ. ಹೀಗಾಗಿ 24 ವಾರಗಳ ತರಬೇತಿ, ಅಭ್ಯಾಸ ಅಗತ್ಯವಿದೆ. ಈ ಮೂಲಕ ಕ್ರಮೇಣ ಬೌಲರ್‌ಗಳ ಮೇಲೆ ಹೊರೆ ಹೆಚ್ಚಿಸಲು ಐಸಿಸಿ ಸೂಚಿಸಿದೆ.
Advertisement
ಒಬ್ಬ ಬೌಲರ್ ಏಕದಿನ ಪಂದ್ಯಗಳಲ್ಲಿ ಗರಿಷ್ಠ 10 ಮತ್ತು ಟಿ20ಯಲ್ಲಿ 4 ಓವರ್‌ಗಳನ್ನು ಬೌಲ್ ಮಾಡಬಹುದು. 5-6 ವಾರಗಳ ತರಬೇತಿಯ ನಂತರ ಬೌಲರ್ ಏಕದಿನ ಅಥವಾ ಟಿ20 ಪಂದ್ಯಗಳನ್ನು ಆಡಬಹುದು. ಟೀಂ ಇಂಡಿಯಾ ಆಟಗಾರರು ಇನ್ನೂ ತರಬೇತಿ ಪ್ರಾರಂಭಿಸಿಲ್ಲ. ಅವರು ಜೂನ್ 1ರಿಂದ ತರಬೇತಿ ಪ್ರಾರಂಭಿಸಿದರೆ, ಜುಲೈ ಅಂತ್ಯದ ವೇಳೆಗೆ ಅವರು ಸೀಮಿತ ಓವರ್‌ಗಳ ಪಂದ್ಯವನ್ನು ಆಡಲು ಸಿದ್ಧರಾಗುತ್ತಾರೆ. ತಂಡವು ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರಯಾಣಿಸಬಹುದು.
Advertisement
ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಂಗ್ಲೆಂಡ್ ಪ್ರವಾಸ ಮಾಡಬೇಕಾಗಿದೆ. ಇಂಗ್ಲೆಂಡ್ ಬೌಲರ್‌ಗಳು ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ಆಟಗಾರರು ತರಬೇತಿಯನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಪರಿಸ್ಥಿತಿ ಕಷ್ಟಕರವಾಗಿದೆ. ಪ್ರವಾಸಕ್ಕೆ ಹೋದ ನಂತರ ಎರಡೂ ದೇಶಗಳ ಆಟಗಾರರು ಸಹ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ.
ಐಸಿಸಿ ನಿಯಮಗಳು:
ತರಬೇತಿ ಪ್ರಾರಂಭಿಸಲು ಸರ್ಕಾರದ ಅನುಮತಿ ಅಗತ್ಯವಿದೆ. ಆಟಗಾರರು ಸರ್ಕಾರ ಮತ್ತು ಐಸಿಸಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆಟ ಆರಂಭಿಸುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸಲು ಮುಖ್ಯ ವೈದ್ಯಕೀಯ ಅಧಿಕಾರಿಯ ನೇಮಕ ಅಗತ್ಯವಾಗಿದೆ. ಆಟಗಾರರ ಅಪಾಯವನ್ನು ಕಡಿಮೆ ಮಾಡಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಐಸಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಚಾರ್ಟರ್ಡ್ ವಿಮಾನಗಳನ್ನು ಪ್ರಯಾಣಕ್ಕಾಗಿ ಬಳಸಬೇಕು. ಈ ಸಮಯದಲ್ಲಿ ಸಾಮಾಜಿಕ ಅಂತರ ಹಾಗೂ ಆರೋಗ್ಯಕರ ಆಹಾರ ಅಗತ್ಯವಾಗಿದೆ. ಸ್ಥಳೀಯ ನಿಯಮಗಳ ಪ್ರಕಾರ ತಂಡವು ಪರೀಕ್ಷೆ ಮತ್ತು ತಪಾಸಣೆಗೆ ಒಳಗಾಗಬೇಕಾಗುತ್ತದೆ. ಲಾಕ್‍ಡೌನ್ ಇದ್ದರೆ ಅದನ್ನು ಪಾಲಿಸಬೇಕು. ಎಲ್ಲಾ ಆಟಗಾರರಿಗೆ ಪ್ರತ್ಯೇಕ ರೂಮ್‍ಗಳನ್ನು ಕಲ್ಪಿಸಬೇಕು ಎಂದು ಐಸಿಸಿ ತಿಳಿಸಿದೆ.
ಯಾವುದೇ ಆಟಗಾರ ತನ್ನ ವಸ್ತುಗಳನ್ನು ಸಹ ಆಟಗಾರರೊಂದಿಗೆ ಹಂಚಿಕೊಳ್ಳುವಂತಿಲ್ಲ. ಯಾರಾದರೂ ಕಿಟ್‍ಗಳನ್ನು ಹಂಚಿಕೊಂಡರೆ, ನಂತರ ಸ್ಯಾನಿಟೈಜರ್ ಬಳಸಬೇಕು. ವೈಯಕ್ತಿಕ ತರಬೇತಿ ಮೊದಲು ಪ್ರಾರಂಭವಾಗುತ್ತದೆ. ಇದರ ನಂತರ ತಂಡವು ಸಣ್ಣ ಗುಂಪುಗಳಲ್ಲಿ ಒಟ್ಟಿಗೆ ತರಬೇತಿ ಆರಂಭಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.