ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯ ಲಾರ್ಡ್ಸ್ ನಿಂದ ನ್ಯೂಜಿಲ್ಯಾಂಡ್‍ಗೆ ಶಿಫ್ಟ್

Public TV
1 Min Read
Ftest

ಮುಂಬೈ: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯವನ್ನು ಐತಿಹಾಸಿಕ ಇಂಗ್ಲೆಂಡ್‍ನ ಲಾರ್ಡ್ಸ್ ಅಂಗಳದಿಂದ ನ್ಯೂಜಿಲ್ಯಾಂಡ್‍ನ ಸೌತಾಂಪ್ಟನ್ ಅಂಗಳಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

GANGULY 2 1

ಸ್ಥಳೀಯ ಮಾಧ್ಯಗಳೊಂದಿಗೆ ಮಾತನಾಡಿದ ಗಂಗೂಲಿ, ಫೈವ್ ಸ್ಟಾರ್ ಸೌಲಭ್ಯವನ್ನು ಹೊಂದಿರುವ ಕಾರಣ ಮತ್ತು ಬಯೋ ಬಬಲ್‍ನಲ್ಲಿ ಆಟಗಾರರನ್ನು ಇರಿಸಲು ಸುಲಭವಾಗುವ ರೀತಿಯಿಂದಾಗಿ ಪಂದ್ಯವನ್ನು ನ್ಯೂಜಿಲ್ಯಾಂಡ್‍ನ ಸೌತಾಂಪ್ಟನ್ ಅಂಕಣದಲ್ಲಿ ಜೂನ್ 18 ರಿಂದ 22 ವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಭಾರತ, ಇಂಗ್ಲೆಂಡ್ ವಿರುದ್ಧ 3-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿದ್ದಂತೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ಗೆ ಅರ್ಹತೆ ಪಡೆದುಕೊಂಡಿತ್ತು. ಈ ಮೂಲಕ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಮೊದಲು ಟೆಸ್ಟ್ ಚಾಂಪಿಯನ್ ಶಿಪ್ ಇಂಗ್ಲೆಂಡ್‍ನ ಲಾರ್ಡ್ಸ್ ನಲ್ಲಿ ನಿಗದಿಯಾಗಿತ್ತು. ಆದರೆ ಇದೀಗ ನ್ಯೂಜಿಲ್ಯಾಂಡ್‍ನಲ್ಲಿ ನಡೆಯಲಿದೆ.

test

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ನೋಡಲು ನಾನು ಕಾತರನಾಗಿದ್ದು, ಇದಕ್ಕಾಗಿ ನ್ಯೂಜಿಲ್ಯಾಂಡ್‍ಗೆ ತೆರಳಲು ಸಿದ್ಧನಾಗುತ್ತಿದ್ದೇನೆ. ನ್ಯೂಜಿಲ್ಯಾಂಡ್‍ನ ನ ಸೌತಾಂಪ್ಟನ್‍ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಗಂಗೂಲಿ ಹೇಳಿದ್ದಾರೆ.

ಗಂಗೂಲಿ ಭಾರತದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗೆಲುವಿನ ಬಗ್ಗೆ ಮಾತನಾಡಿ, ಭಾರತ ತಂಡ ಉತ್ತಮವಾಗಿ ಆಡಿ ಸರಣಿ ಜಯದೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್‍ಗೆ ಅರ್ಹತೆ ಪಡೆದುಕೊಂಡಿದೆ. ಆಟಗಾರರು ಕೊರೊನಾ ಬಳಿಕ ಬಯೋ ಬಬಲ್‍ನಲ್ಲಿದ್ದುಕೊಂಡು ಕ್ರಿಕೆಟ್ ಆಡುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಕೂಡ ನಡೆಯಲಿದೆ ಎಂದರು.

TEST CRICKET2

ಭಾರತ, ಆಸ್ಟ್ರೇಲಿಯಾದಲ್ಲಿ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಟೆಸ್ಟ್ ಸರಣಿ ಗೆದ್ದರೆ, ತವರಿನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಸರಣಿ ಜಯಿಸಿದೆ. ಭಾರತ ತಂಡದ ಪರ ರಿಷಬ್ ಪಂತ್ ಮಿಂಚುಹರಿಸುವ ಮೂಲಕ ತಂಡದಲ್ಲಿದ್ದ ಮಾಜಿ ಆಟಗಾರರಾದ ಸೆಹ್ವಾಗ್, ಯುವರಾಜ್, ಧೋನಿ ಬಳಿಕ ಉತ್ತಮ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *