ಸೌತಾಪ್ಟಂನ್: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಪಟ್ಟಿಯಲ್ಲಿ ಕೊನೆಗೂ ವೆಸ್ಟ್ ಇಂಡೀಸ್ ಖಾತೆ ತೆರೆದಿದೆ. ಸೌತಾಪ್ಟಂನ್‍ನಲ್ಲಿ ಭಾನುವಾರ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ 4 ವಿಕೆಟ್‍ಗಳ ಗೆಲುವು ಪಡೆದಿದ್ದು, ಆ ಮೂಲಕ 40 ಅಂಕಗಳನ್ನು ಪಡೆದುಕೊಂಡಿದೆ.
ಆಗಸ್ಟ್ 1, 2019ರಿಂದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿದ್ದು, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿ 9 ದೇಶಗಳು ಕಣದಲ್ಲಿವೆ. ಪ್ರತಿ ತಂಡ ತವರಿನಲ್ಲಿ ಮತ್ತು ವಿದೇಶಿ ನೆಲದಲ್ಲಿ 3 ಟೆಸ್ಟ್ ಟೂರ್ನಿಗಳನ್ನು ಆಡಲಿವೆ.
Advertisement
Advertisement
27 ಟೆಸ್ಟ್ ಟೂರ್ನಿಗಳಲ್ಲಿ 71 ಟೆಸ್ಟ್ ಪಂದ್ಯಗಳು ನಡೆಯಲಿದ್ದು, 2 ವರ್ಷಗಳ ಅವಧಿಯಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಮೊದಲ 2 ಸ್ಥಾನ ಪಡೆದಿರುವ ತಂಡಗಳ ನಡುವೆ 2021 ಜೂನ್ ನಲ್ಲಿ ಫೈನಲ್ ನಡೆಯಲಿದೆ. ಫೈನಲ್ ಪಂದ್ಯ ಗೆದ್ದ ತಂಡ ಟೆಸ್ಟ್ ಚಾಂಪಿಯನ್ ಆಗಿ ನಿಲ್ಲಲಿದೆ.
Advertisement
ಸದ್ಯ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದಿರುವ ಟೀಂ ಇಂಡಿಯಾ 9 ಟೆಸ್ಟ್ ಪಂದ್ಯಗಳಿಂದ 360 ಅಂಕಗಳಿಸಿದೆ. 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ 296 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡ 7 ಟೆಸ್ಟ್ ಪಂದ್ಯಗಳಿಂದ 180 ಅಂಕಗಳನ್ನು ಗಳಿಸಿ 3ನೇ ಸ್ಥಾನ ಪಡೆದಿದೆ. ಉಳಿದಂತೆ 2ನೇ ಟೆಸ್ಟ್ ಟೂರ್ನಿ ಆಡುತ್ತಿರುವ ವೆಸ್ಟ್ ಇಂಡೀಸ್ ಮೊದಲ ಜಯದೊಂದಿಗೆ 40 ಅಂಕ ಪಡೆದು ಖಾತೆ ತೆರೆದಿದೆ. ಇಂಗ್ಲೆಂಡ್ ತಂಡ 146 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ನಲ್ಲಿ ಜುಲೈ 16 ರಿಂದ ಆರಂಭವಾಗಲಿದೆ.
Advertisement
Windies win by 4 wickets!#ENGvWI pic.twitter.com/uD7ax9pgwF
— ICC (@ICC) July 12, 2020