ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್‍ನಿಂದ ಇಂಗ್ಲೆಂಡ್ ಔಟ್ ಆಗಿದ್ದರೂ ಭಾರತ ಮತ್ತು ಆಸ್ಟ್ರೇಲಿಯಾದ ಪೈಕಿ ಯಾರು ಅರ್ಹತೆ ಪಡೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಮೂರನೇ ಪಂದ್ಯವನ್ನು 10 ವಿಕೆಟ್‌ಗಳಿಂದ ಭಾರತ ಜಯಸಿ 490 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. 442 ಅಂಕ ಪಡೆದಿರುವ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ. 420 ಅಂಕ ಪಡೆದಿರುವ ನ್ಯೂಜಿಲೆಂಡ್ 2ನೇ ಸ್ಥಾನ, 332 ಅಂಕ ಹೊಂದಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
Advertisement
India or Australia – who will book a place in the #WTC21 final alongside New Zealand? pic.twitter.com/FYGIAVT0fC
— ICC (@ICC) February 25, 2021
Advertisement
ಇಂದಿನ ಪಂದ್ಯವನ್ನು ಭಾರತ ಗೆದ್ದಿದ್ದರೂ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆಯುತ್ತಾ ಇಲ್ಲವೋ ಇನ್ನುವುದು 4ನೇ ಟೆಸ್ಟ್ ಫಲಿತಾಂಶದ ಮೇಲೆ ನಿಂತಿದೆ. ಇದನ್ನೂ ಓದಿ: ಟೆಸ್ಟ್ ಚಾಂಪಿಯನ್ ಶಿಪ್ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?
Advertisement
India top the table ????
They now need to win or draw the last Test to book a place in the #WTC21 final ????#INDvENG pic.twitter.com/FQcBTw6dj6
— ICC (@ICC) February 25, 2021
Advertisement
ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ ಸುಲಭವಾಗಿ ಅರ್ಹತೆ ಪಡೆಯಲಿದೆ. ಒಂದು ವೇಳೆ ಗೆಲ್ಲದೇ ಇದ್ದರೂ ಕನಿಷ್ಠ ಡ್ರಾ ಮಾಡಿಕೊಂಡರೂ ಭಾರತಕ್ಕೆ ಅವಕಾಶವಿದೆ.
ಕೊನೆಯ ಪಂದ್ಯವನ್ನು ಭಾರತ ಸೋತರೆ ಇಂಗ್ಲೆಂಡ್ ಅರ್ಹತೆ ಪಡೆಯುವುದಿಲ್ಲ ಬದಲಾಗಿ ಆಸ್ಟ್ರೇಲಿಯಾ ಅರ್ಹತೆ ಪಡೆಯಲಿದೆ. ಆಸ್ಟ್ರೇಲಿಯಾ 332 ಅಂಕ ಪಡೆದರೂ ಅರ್ಹತೆ ಪಡೆಯಲು ಕಾರಣವಾಗಿರುವುದು ಪರ್ಸಟೇಜ್ ಆಫ್ ಪಾಯಿಂಟ್.
ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 70 ಪಿಸಿಟಿಯೊಂದಿಗೆ ಈಗಾಗಲೇ ಫೈನಲ್ ಪ್ರವೇಶಿಸಿದೆ. ಭಾರತ 490 ಅಂಕ ಪಡೆದರೂ 71.0 ಪಿಸಿಟಿ ಹೊಂದಿದೆ. ಅದೇ ಆಸ್ಟ್ರೇಲಿಯಾ 332 ಅಂಕದೊಂದಿಗೆ 69.2 ಪಿಸಿಟಿ ಹೊಂದಿದೆ. ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಸೋತರೆ ಪಿಸಿಟಿ ಆಧಾರದ ಮೇಲೆ ಆಸ್ಟ್ರೇಲಿಯಾ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಈ ಕಾರಣಕ್ಕೆ ಭಾರತಕ್ಕೆ ಕೊನೆಯ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲದೇ ಇದ್ದರೂ ಡ್ರಾ ಮಾಡಿಕೊಂಡರೂ ಕಪ್ ಜಯಿಸುವುದರ ಜೊತೆಗೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅವಕಾಶ ಪಡೆಯಲಿದೆ.