ಟೆಕ್ಕಿ ಪತಿ, ಬಾಮೈದರ ಕಿರುಕುಳ- ಮನನೊಂದ ಗರ್ಭಿಣಿ ಆತ್ಮಹತ್ಯೆಗೆ ಶರಣು

Public TV
2 Min Read
WhatsApp Image 2020 11 28 at 2.42.23 PM

– ಎಂಬಿಬಿಎಸ್ ಓದುತ್ತಿದ್ದ ಪತ್ನಿ
_ ಮದ್ವೆಯಾದ ಕೆಲವೇ ದಿನಗಳಲ್ಲಿ ಮನಸ್ತಾಪ

ಹೈದರಾಬಾದ್: ಗಂಡ ಮತ್ತು ಆತನ ತಮ್ಮಂದಿರ ಕಿರುಕುಳಕ್ಕೊಳಗಾದ ಗರ್ಭಿಣಿ ಮದುವೆಯಾದ ಒಂದು ವರ್ಷದೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಅರ್ಷಿಯಾ ಎಂದು ಗುರುತಿಸಲಾಗಿದೆ. ಅನಂತಪುರ ಜಿಲ್ಲೆಯ ಹಿಂದೂಪುರ ಪಟ್ಟಣದ ಪತಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮತ್ತು ಮೈದುನರಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಡಕಾಸಿರಾ ಪಟ್ಟಣದ ಮೂಲದ ಅರ್ಷಿಯಾ ಎಂಬಿಬಿಎಸ್ ಓದುತ್ತಿದ್ದಳು. ಈಕೆ ಕೋರ್ಸ್ ಮುಗಿಸಲು ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ ಪೋಷಕರು ವರನನ್ನು ಹುಡುಕಿದರು. 2019 ರ ನವೆಂಬರ್‍ನಲ್ಲಿ ಹಿಂದೂಪುರದ ಆರ್‍ಟಿಸಿ ಕಾಲೋನಿಯ ಸಾಫ್ಟ್‍ವೇರ್ ಉದ್ಯೋಗಿ ನೂರುಲ್ಲಾಗೆ ಮದುವೆ ಮಾಡಿಕೊಟ್ಟರು.

Untitled 1 copy 2

ಅರ್ಷಿಯಾ ಕುಟುಂಬದವರು ಉತ್ತಮ ವರನೆಂದು ನಂಬಿ ಮಗಳನ್ನು ಮದುವೆ ಮಾಡಿ ಕಳುಹಿಸಿದರು. ಮಗಳು ಸಂತೋಷವಾಗಿರಲಿ ಎಂದು ಮದುವೆಯ ಸಮಯದಲ್ಲಿ 5 ಲಕ್ಷ ರೂ. ವರದಕ್ಷಿಣೆ ಮತ್ತು ಅರ್ಧ ಕಿಲೋ ಚಿನ್ನಾಭರಣಗಳನ್ನು ಸಹ ನೀಡಿದರು. ಆದರೆ ಮದುವೆಯಾದ ಒಂದು ತಿಂಗಳಲ್ಲಿ ಅವಳ ಪತಿ ಮತ್ತು ಅವನ ತಮ್ಮಂದಿರು ಸಣ್ಣ ವಿಷಯಗಳನ್ನು ಇಟ್ಟುಕೊಂಡು ಕಿರುಕುಳ ಮತ್ತು ಅನುಮಾನಿಸಲು ಪ್ರಾರಂಭಿಸಿದರು.

ದಂಪತಿ ನಡುವೆ ಮನಸ್ತಾಪ:
ಅರ್ಷಿಯಾ ಗರ್ಭಿಣಿಯಾದ ಮೇಲೆ ನೂರುಲ್ಲಾನ ಮತ್ತಷ್ಟು ಅನುಮಾನಿಸಲು ಪ್ರಾರಂಭಿಸಿದರು. ತವರು ಮನೆಯಿಂದ ವರದಕ್ಷಿಣೆ ಮತ್ತು ಕಾರನ್ನು ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದನು. ನೂರುಲ್ಲಾ ನನ್ನ ಹೆಸರಿನಲ್ಲೇ ಆಸ್ತಿಗಳನ್ನು ಬರೆಯುಬೇಕು ಎಂದು ಅರ್ಷಿಯಾಗಳನ್ನು ಪೀಡಿಸುತ್ತಿದ್ದನು. ಹೀಗೆ ದಂಪತಿ ನಡುವೆ ಮನಸ್ತಾಪ ಇತ್ತು.

Police Jeep

ಅರ್ಷಿಯಾಗೆ ಜನ್ಮದಿನದಂದು ಶುಭಾಶಯ ಕೋರಲು ಈಕೆ ಪೋಷಕರು ಫೋನ್ ಕರೆಯನ್ನು ಮಾಡಿದ್ದರು. ಆದರೆ ಈಕೆ ಅವರೊಂದಿಗೆ ಸರಿಯಾಗಿ ಮಾತನಾಡಲಿಲ್ಲ ಮತ್ತು ನಂತರ ಕರೆ ಮಾಡುವುದಾಗಿ ಹೇಳಿದ್ದಳು. ಆದರೆ ಅರ್ಷಿಯಾ ಮತ್ತೆ ಮರಳಿ ಕರೆಯನ್ನು ಮಾಡಲೇ ಇಲ್ಲಾ.

ಸಾವಿನ ಬಗ್ಗೆ ತಿಳಿದುದ್ದು ಹೇಗೆ:
ಅರ್ಷಿಯಾ ಎಚ್ಚರಗೊಳ್ಳುತ್ತಿಲ್ಲ ಎಂದು ಹಿಂದೂಪುರದ ನಿಂಕಂಪಲ್ಲಿನಲ್ಲಿರುವ ಸಂಬಂಧಿಕರು ಆಕೆಯ ಪೋಷಕರಿಗೆ ತಿಳಿಸಿದರು. ಅನುಮಾನದಿಂದ ಈಕೆಯಪೋಷಕರು ಮತ್ತು ಸಹೋದರರು ಹಿಂದೂಪುರದಲ್ಲಿರುವ ಮಗಳ ಪತಿಯ ನಿವಾಸಕ್ಕೆ ಬಂದು ನೋಡಿದಾಗ ಅರ್ಷಿಯಾ ಹಾಸಿಗೆಯ ಮೇಲೆ ನಿರ್ಜೀವವಾಗಿ ಮಲಗಿದ್ದಳು. ಮಗಳ ಈ ಸ್ಥಿತಿಯನ್ನು ಕಂಡು ಪೋಷಕರು ಆಘಾತಗೊಂಡಿದ್ದಾರೆ.

police 1 e1585506284178 4 medium

ಯುವತಿಯ ಕುಟುಂಬಸ್ಥರು ಏನಾಯಿತು ಎಂದು ನೂರುಲ್ಲಾನನ್ನು ಕೇಳಿದ್ದಾರೆ. ಆದರೆ ಈತ ಬೇಜವಾಬ್ದಾರಿತನದಿಂದ ನೇಣು ಹಾಕಿಕೊಂಡಿದ್ದಾಳೆ ಎಂದು ಹಾರಿಕೆಯ ಉತ್ತರವನ್ನು ಕೊಟ್ಟಿದ್ದಾನೆ. ಅವನ ಉತ್ತರಕ್ಕೆ ಅರ್ಷಿಯಾ ಕುಟುಂಬಸ್ಥರು ಕೋಪಗೊಂಡಿದ್ದಾರೆ. ಎರಡು ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ಜಗಳಗಳು ಆಗಿವೆ.

marriage 1

ಮಾಹಿತಿ ಪಡೆದ ಕೂಡಲೇ ಒನ್ ಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಮನೆಗೆ ಬೀಗ ಹಾಕಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಿಂದೂಪುರ ಆಸ್ಪತ್ರೆಗೆ ಕಳುಹಿಸಿದ್ದಾರೆ. ಡಿಎಸ್ಪಿ ವಂಶೀಧರ್ ಗೌಡ, ತಹಶೀಲ್ದಾರ್ ಶ್ರೀನಿವಾಸ್ ಮತ್ತು ಸಿಐ ಬಾಲಮದ್ದಿಲ್ಲೆತಿ ಅವರು ಮನೆ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

Money 2

ಮದುವೆಯಾದ ಕೆಲವು ದಿನಗಳ ನಂತರ ವರದಕ್ಷಿಣೆಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ನ್ಯಾಯ ಕೋಡಿಸಿ ಎಂದು ಅರ್ಷಿಯಾ ತಾಯಿ ಅಖ್ತಾರ್ ಜಾನ್ ಮತ್ತು ಸಹೋದರ ಇಮ್ರಾನ್ ಪೊಲೀಸರಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *