ನವದೆಹಲಿ: ಮೋದಿವರನ್ನು ಸ್ಪೂರ್ತಿಯಾಗಿ ಪಡೆದು ಚಹಾವನ್ನು ಮಾರಾಟ ಮಾಡುತ್ತಿದ್ದ ಮಹಿಳೆ ಇದೀಗ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡುವ ಮೂಲಕವಾಗಿ ರಾಜಕೀಯ ಪ್ರವೇಶಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸ್ಪೂರ್ತಿಯಾಗಿ ಪಡೆದು ಎಷ್ಟೋ ಜನ ಪದವೀಧರರು ಚಹಾ ಅಂಗಡಿಯನ್ನು ಇಟ್ಟು ಜೀವನ ಸಾಗಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕಳೆದ ಮೂರು ವರ್ಷದಿಂದ ಟೀ ಅಂಗಡಿ ನಡೆಸಿಕೊಂಡು ಬರುತ್ತಿದ್ದು, ಇದೀಗ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.
Advertisement
Advertisement
ಮೀರತ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಮೀನಾಕ್ಷಿಯವರಿಗೆ ಮೂವರು ಮಕ್ಕಳಿದ್ದಾರೆ. ಮುಜಫರ್ ನಗರದ ಚೋರಾವಾಲಾ ಎಂಬಲ್ಲಿ ಟೀ ಅಂಗಡಿಯನ್ನು ನಡೆಸುತ್ತಿರುವ ಮೀನಾಕ್ಷಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿಯಲ್ಲಿ ಚಹಾ ಅಂಗಡಿಯನ್ನು ಪ್ರಾರಂಭ ಮಾಡಿದ್ದಾರೆ.
Advertisement
Advertisement
ಮುಜಾಫರ್ ನಗರದ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಪತಿ ಗ್ಯಾನ್ ಸಿಂಗ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದಾರೆ. ನಾನು ನರೇಂದ್ರ ಮೋದಿಯವರ ಜೀವನದ ಹಾದಿಯನ್ನು ತಿಳಿದು, ಸ್ಪೂರ್ತಿ ಪಡೆದಿದ್ದೇನೆ. ಚಹಾವಾಲಾ ಆಗಿದ್ದ ಮೋದಿ ಮುಂದೆ ದೇಶದ ಪ್ರಧಾನಮಂತ್ರಿಯಾದರು. ಚಹಾವಾಲಿಯಾಗಿರುವ ನಾನೇಕೆ ಹಳ್ಳಿಯ ಮುಖ್ಯಸ್ಥೆಯಾಗಬಾರದು ಎಂದು ಹೇಳಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ಇಚ್ಛಿಸಿದ್ದೇನೆ. ಯಾವ ರಾಜಕೀಯ ಪಕ್ಷದ ಸಹಾಯವನ್ನು ಬಯಸಿಲ್ಲ. ನನಗೆ ನನ್ನ ಹಳ್ಳಿ ಜನರ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಈ ಹಿಂದೆ ನನ್ನ ಪತ್ನಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿ ಗೆದ್ದಿದ್ದರು. ನಮ್ಮ ಹಳ್ಳಿಯವರು ಇದೀಗ ಮತ್ತೆ ಚುನಾವಣೆಗೆ ನಿಲ್ಲುವಂತೆ ಹೇಳಿದ್ದಾರೆ ಎಂದು ಮೀನಾಕ್ಷಿಯವರ ಪತಿ ಗ್ಯಾನ್ ಸಿಂಗ್ ಹೇಳಿದ್ದಾರೆ.