– ಮೈದಾನದಿಂದ ಒಳಗೆ ಓಡಿದ ಕ್ರಿಕೆಟ್, ಫುಟ್‍ಬಾಲ್ ಆಟಗಾರರು
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರು ತಂಗಿರುವ ಹೋಟಿಲಿನಿಂದ 30 ಕಿಲೋ ಮೀಟರ್ ದೂರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ.
ಸದ್ಯ ಭಾರತ ಕ್ರಿಕೆಟ್ ತಂಡ ಮೂರು ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಆಸ್ಟ್ರೇಲಿಯಾಗೆ ಹೋಗಿದೆ. ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸದ್ಯ ಅಭ್ಯಾಸ ಮಾಡುತ್ತಿದ್ದಾರೆ. ಇಂಡಿಯಾ ಆಟಗಾರರು ತಂಗಿರುವ ಸಿಡ್ನಿ ಒಲಿಂಪಿಕ್ ಪಾರ್ಕಿನಿಂದ 30 ಕಿಲೋ ಮೀಟರ್ ದೂರದ ಮೈದಾನವೊಂದರಲ್ಲಿ ವಿಮಾನ ಪತನವಾಗಿದೆ.
Advertisement
Advertisement
ಕ್ರೋಮರ್ ಪಾರ್ಕ್ ಮೈದಾನದಲ್ಲಿ ಲಘು ವಿಮಾನವೊಂದು ನೆಲಕ್ಕಪ್ಪಳಿಸಿದ್ದು, ಆ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಆಟಗಾರರು ಮತ್ತು ಫುಟ್‍ಬಾಲ್ ಪ್ಲೇಯರ್ಸ್ ವಿಮಾನ ಬಿದ್ದ ರಭಸಕ್ಕೆ ಹೆದರಿ ಮೈದಾನದಿಂದ ಓಡಿ ಹೋಗಿದ್ದಾರೆ. ಲಘು ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನದಲ್ಲಿ ಇದ್ದ ಇಬ್ಬರು ತರಬೇತಿ ಪೈಲೆಟ್‍ಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.
Advertisement
Advertisement
ವಿಮಾನ ಪತನವಾದಾಗ ಸ್ಥಳದಲ್ಲಿ ಫುಟ್‍ಬಾಲ್ ಮ್ಯಾಚ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ವಿಮಾನ ಬೀಳುವುದನ್ನು ಗಮನಿಸಿದ ಆಟಗಾರರು ಒಳಗೆ ಓಡಿ ಹೋಗಿದ್ದಾರೆ. ಈ ಕಾರಣದಿಂದ ಯಾವುದೇ ಸಾವು ಸಂಭವಿಸಿಲ್ಲ. ಅಪಘಾತವಾದ ವಿಮಾನ ಟ್ರೈನಿಂಗ್ ಸ್ಕೂಲ್‍ಗೆ ಸೇರಿದ್ದಾಗಿದ್ದು, ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡುವಾಗ ವಿಮಾನ ಎಂಜಿನ್ ಕೈಕೊಟ್ಟು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ.