ಮುಂಬೈ: ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಭಾರತ ತಂಡಕ್ಕೆ ಯಾರೂ ಕೂಡ ನೀಡದೇ ಇರುವಂತಹ ಜೀವಮಾನದ ಅತ್ಯಂತ ಶ್ರೇಷ್ಠವಾದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಡಿ ಹೊಗಳಿದ್ದಾರೆ.
Advertisement
ರಿಷಬ್ ಪಂತ್ ಕಳಪೆ ಫಾರ್ಮ್‍ನಲ್ಲಿ ಭಾರತ ತಂಡದಲ್ಲಿದ್ದಾಗ ಎಲ್ಲರೂ ಕೂಡ ದೂರುತಿದ್ದರು. ಆ ಬಳಿಕ ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡು ಕಳೆದ ಎರಡು ಮೂರು ತಿಂಗಳಲ್ಲಿ ಭಾರತ ತಂಡದ ಆಧಾರ ಸ್ತಂಭವಾಗಿ ಅತ್ಯುತ್ತಮ ನಿರ್ವಾಹಣೆಯ ಮೂಲಕ ತಂಡಕ್ಕೆ ಯಾರೂ ನೀಡದೇ ಇರುವಂತಹ ಕೊಡುಗೆ ಕೊಟ್ಟಿದ್ದಾರೆ ಎಂದು ಶಾಸ್ತ್ರಿ ಗುಣಗಾನ ಮಾಡಿದ್ದಾರೆ.
Advertisement
Advertisement
ಪಂತ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಿಡ್ನಿ ಮತ್ತು ಬ್ರಿಸ್ಬೇನ್ ಟೆಸ್ಟ್ ನಲ್ಲಿ ಭಾರತ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ಆಧಾರವಾಗಿ 2-1 ರಿಂದ ಸರಣಿ ಗೆಲ್ಲಿಸಿಕೊಟ್ಟರೆ, ನಂತರ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮ್ಯಾನ್ ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ ಕೂಡ ಪಂತ್ ದಿಟ್ಟ ಬ್ಯಾಟಿಂಗ್ ಮುಂದುವರಿಸಿ ಅಮೋಘ ಶತಕ ಸಿಡಿಸಿ ಭಾರತಕ್ಕೆ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದುಕೊಳ್ಳುವಂತೆ ಮಾಡಿದ್ದರು.
Advertisement
ಪಂತ್ ಅವರ ಬ್ಯಾಟಿಂಗ್ ಸಾಹಸದ ಬಗ್ಗೆ ಕೊಂಡಾಡಿರುವ ಶಾಸ್ತ್ರಿ, ಪಂತ್ ಅವರ ಬ್ಯಾಟಿಂಗ್ ಪರಾಕ್ರಮ ನೋಡುತ್ತಿದ್ದಾಗ ನನಗೆ ನನ್ನ ಹಿಂದಿನ ದಿನಗಳ ನೆನಪಾಗುತ್ತದೆ. ನಮ್ಮ ಜೀವನದ 21, 22 ಮತ್ತು 23ನೇ ವರ್ಷದಲ್ಲಿ ನಾವು ಕಾಣುವ ಯಶಸ್ಸು ನಮ್ಮ ಮುಂದಿನ ಜೀವನವನ್ನು ರೂಪಿಸುತ್ತದೆ. ಪಂತ್ ಕಳೆದ ಬಾರಿಯ ಐಪಿಎಲ್ ವೇಳೆ ತಮ್ಮ ಬ್ಯಾಟಿಂಗ್ ಲಯ ಕಳೆದುಕೊಂಡು ಎಲ್ಲರಿಂದ ಟೀಕೆಗೆ ಒಳಗಾಗಿದ್ದರು. ಆದರೆ ಭಾರತ ತಂಡಕ್ಕೆ ಮರಳಿದ ನಂತರ ತಮ್ಮ ದೇಹದ ತೂಕ ಇಳಿಸಿಕೊಂಡು ಶ್ರಮಪಟ್ಟು ತಮ್ಮ ನಿಜವಾದ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರ್ಪಡಿಸಿ, ಉತ್ತಮ ಫಾರ್ಮ್‍ಗೆ ಮರಳಿದ್ದಾರೆ. ಇದೀಗ ಅವರು ಯಾವ ರೀತಿ ಭಾರತ ತಂಡಕ್ಕೆ ಸಹಕಾರಿಯಾಗುತ್ತಿದ್ದಾರೆ ಎಂಬುದನ್ನು ವಿಶ್ವವೇ ಗಮನಿಸುತ್ತಿದೆ ಎಂದರು.