ದುಬೈ: 2021 ಐಸಿಸಿ ಟಿ20 ವಿಶ್ವಕಪ್‍ಗಾಗಿ ತಂಡಗಳ ಗುಂಪನ್ನು ಐಸಿಸಿ ಪ್ರಕಟಿಸಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿದೆ.
ಐಸಿಸಿ ಟಿ20 ವಿಶ್ವಕಪ್ ಪಂದ್ಯಾಟಕ್ಕಾಗಿ ಇಂದು ತಂಡಗಳ ಗುಂಪನ್ನು ಪ್ರಕಟಿಸಿದೆ. ಗ್ರೂಪ್ ಎರಡರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಘ್ಘಾನಿಸ್ತಾನ ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಂಡಗಳು ಕಾಣಿಸಿಕೊಳ್ಳಲಿದೆ. ಇದನ್ನೂ ಓದಿ: ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?
ಗ್ರೂಪ್ ಒಂದರಲ್ಲಿ ವೆಸ್ಟ್ ಇಂಡಿಸ್, ಇಂಗ್ಲೆಂಡ್ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಂಡಗಳು ಕಾಣಿಸಿಕೊಳ್ಳಲಿದೆ. ಬದ್ಧ ವೈರಿಗಳು ಎನಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಇರುವ ಕಾರಣ ರೋಚಕ ಪಂದ್ಯಾಟವೊಂದು ಈ ಬಾರಿಯ ಟಿ20 ವಿಶ್ವಕಪ್‍ನಲ್ಲಿ ಕ್ರಿಕೆಟ್‍ಪ್ರಿಯರಿಗೆ ಕಾಣಸಿಗಲಿದೆ.
All you need to know right here ???? https://t.co/lQK0sX5xv5#T20WorldCup https://t.co/fJnbCJdHDD
— ICC (@ICC) July 16, 2021
2021ರ ಟಿ20 ವಿಶ್ವಕಪ್ ಈ ಬಾರಿ ಭಾರತದಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿತ್ತು. ಆದರೆ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದಾಗಿ ಟೂರ್ನಿಯನ್ನು ಯುಎಇ ಮತ್ತು ಓಮನ್‍ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಸಲು ಐಸಿಸಿ ನಿರ್ಧರಿಸಿದೆ.