ಉಡುಪಿ: ಅರಬ್ಬಿ ಸಮುದ್ರ ತೀರದಲ್ಲಿ ವಾಸಿಸುವ ಮುಸಲ್ಮಾನರಿಗೆ ಇಂದು ಈದುಲ್ ಫಿತರ್ ಹಬ್ಬ. ಒಂದು ತಿಂಗಳ ರಂಜಾನ್ ಉಪವಾಸವನ್ನು ಮುಗಿಸಿದ ಮುಸ್ಲಿಮರು, ಇಂದು ಉಪವಾಸ ತೊರೆದು ಟಿವಿಯಲ್ಲಿ ನಮಾಜ್ ನೋಡುತ್ತಾ ಹಬ್ಬ ಆಚರಿಸುತ್ತಿದ್ದಾರೆ.
ಈದುಲ್ ಫಿತರ್ ಹಬ್ಬಕ್ಕೆ ಭಾನುವಾರದ ಕೊರೊನಾ ಕರ್ಫ್ಯೂ ಅಡ್ಡಿಯಾಗಿದೆ. ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡದಂತೆ ಉಡುಪಿ ಜಿಲ್ಲಾಡಳಿತ ಸೂಚನೆ ನೀಡಿದೆ. ಮನೆಯಲ್ಲೇ ಹೇಗೆ ಹಬ್ಬ ಆಚರಿಸೋದು ಎಂದು ಆಲೋಚನೆ ಮಾಡಿದ ಉಡುಪಿಯ ಜಾಮಿಯಾ ಮಸೀದಿ, ಒಂದು ಪ್ಲಾನ್ ಮಾಡಿದೆ. ಉಡುಪಿಯಲ್ಲಿ ಕಾರ್ಯಾಚರಿಸುವ ಸಿ4ಯು ಖಾಸಗಿ ನೇರ ಪ್ರಸಾರ ಚಾನೆಲ್ ಮೂಲಕ ಹಬ್ಬದ ನಮಾಜ್, ಕುರಾನ್ ಪಠಣ ಮತ್ತು ಧಾರ್ಮಿಕ ವಿಧಿಯನ್ನು ನೇರ ಪ್ರಸಾರ ಮಾಡಲು ಮುಂದಾಗಿದೆ.
Advertisement
Advertisement
ಬೆಳಗ್ಗೆ ಎಂಟು ಗಂಟೆಯಿಂದ ಚಾನಲ್‍ನಲ್ಲಿ ಜಾಮಿಯಾ ಮಸೀದಿಯ ಧರ್ಮಗುರುಗಳು ಈದುಲ್ ಫಿತರ್ ಸಂದರ್ಭ ಅನುಸರಿಸುವ ಧಾರ್ಮಿಕ ವಿಧಿವಿಧಾನಗಳ ಬೋಧನೆಯನ್ನು ಮಾಡುತ್ತಾರೆ. ಮನೆಯಲ್ಲಿರುವ ಮುಸ್ಲಿಮರು ಟಿವಿ ನೋಡುತ್ತಾ ಅದನ್ನು ಫಾಲೋ ಮಾಡಬೇಕು. ಈ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಧಾರ್ಮಿಕ ವಿಧಿ ವಿಧಾನಕ್ಕೆ ಚ್ಯುತಿ ಬಾರದ ಹಾಗೆ ಉಡುಪಿಯ ಮುಸಲ್ಮಾನರು ಹಬ್ಬ ಆಚರಿಸಿದ್ದಾರೆ.
Advertisement
Advertisement
ಮನೆಯಲ್ಲೇ ನಮಾಜ್ ಮಾಡಿದ ಅನ್ಸಾರ್ ಅಹಮ್ಮದ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೊರೊನಾ ಜನರ ನೆಮ್ಮದಿ ಹಾಳು ಮಾಡಿದೆ. ಈ ಬಾರಿ ನಮ್ಮ ಹಬ್ಬವನ್ನೂ ಹಾಳು ಮಾಡಿದೆ. ಆದರೆ ಕುಟುಂಬದವರು ಮನೆಯಲ್ಲೇ ನಮಾಜ್ ಮಾಡಿ ಹಬ್ಬ ಆಚರಣೆ ಮಾಡಿದ್ದೇವೆ. ಹೊರಗಿನ ಯಾರನ್ನೂ ನಮಾಜ್ ಸಂದರ್ಭದಲ್ಲಿ ಸೇರಿಸಿಲ್ಲ ಎಂದು ಹೇಳಿದರು.