ಹಾವೇರಿ: ಕುಟುಂಬ ಸಮೇತ ದುರ್ಗಾದೇವಿ ಜಾತ್ರೆಗೆ ಹೋಗಿದ್ದರು. ಖುಷಿಯಿಂದ ಜಾತ್ರೆ ಮಾಡಿ ಊರಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ಘಟನೆ ನಡೆದಿದೆ. ಬೈಕ್ ಮೇಲೆ ತೆರಳುತ್ತಿದ್ದಾಗ ಟಿಪ್ಪರ್ ಹರಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ದಂಪತಿಯನ್ನು ಸಿದ್ದಪ್ಪ ನಾಗೇನಹಳ್ಳಿ(40), ಅನಸೂಯಮ್ಮ(32) ಹಾಗೂ ಮಕ್ಕಳಾದ ವನಿತಾ(11), ಸುನಿತಾ(9) ಎಂದು ಗುರುತಿಸಲಾಗಿದೆ.
ದುರ್ಗಾದೇವಿ ಜಾತ್ರೆ ಮುಗಿಸಿಕೊಂಡು ಬೈಕ್‍ನಲ್ಲಿ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಮರಳು ತುಂಬಿದ್ದ ಟಿಪ್ಪರ್ ಹರಿದು ಈ ದುರ್ಘಟನೆ ನಡೆದಿದೆ. ಅಕ್ರಮ ಮರಳು ದಂಧೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಪಿಐಗಳಾದ ಶ್ರೀಶೈಲ ಚೌಗಲಾ, ಭಾಗ್ಯವಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.