ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಟಿಕ್‍ಟಾಕ್ ಬ್ಯಾನ್ ಆಗಿದ್ದಕ್ಕೆ ಟಿಕ್‍ಟಾಕ್ ಸ್ಟಾರ್ ಜನ್ನತ್ ಮಿರ್ಜಾ ದೇಶವನ್ನೆ ತೊರೆಯುವ ನಿರ್ಧಾರ ಮಾಡಿದ್ದಳು ಎಂಬ ಮಾಹಿತಿ ತಡವಾಗಿ ಲಭಿಸಿದೆ.
ಟಿಕ್‍ಟಾಕ್ ಮೂಲಕವೇ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದ್ದ ಜನ್ನತ್ ಮಿರ್ಜಾ, ತನ್ನ ಕ್ಯೂಟ್ ವಿಡಿಯೋಗಳ ಮೂಲಕ ಟಿಕಾಟಾಕ್ ಆ್ಯಪಿನಲ್ಲಿ ಒಂದು ಕೋಟಿಗೂ ಅಧಿಕವಾದ ಅಭಿಮಾನಿಗಳು ಮತ್ತು ಫೋಲೋವರ್ಸ್ ಹೊಂದಿದ್ದಳು. ಈ ಮೂಲಕ ಪಾಕಿಸ್ತಾನದಲ್ಲಿ ನಂಬರ್ ಓನ್ ಟಿಕ್‍ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಳು.
ಆದರೆ ಇತ್ತೀಚೆಗೆ ದೇಶದಲ್ಲಿ ಟಿಕ್ ಟಾಕ್ ಮೂಲಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಯುವ ಜನರು ಹಾಳಾಗುತಿದ್ದರೆ. ಅಶ್ಲೀಲ ವಿಡಿಯೋಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಟಿಕ್ ಟಾಕ್ ಅನ್ನು ನಿಷೇಧಿಸಿತ್ತು.
ಜನ್ನತ್ ಮಿರ್ಜಾ ಮಾಡೆಲ್ ಆಗಿದ್ದು, ಟಿಕ್‍ಟಾಕ್ ಮೂಲಕವೇ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದರು. ಈಗ ಟಿಕ್‍ಟಾಕ್ ಬ್ಯಾನ್ ಆದರೆ ನನ್ನ ಅದಾಯಕ್ಕೆ ಪೆಟ್ಟು ಬೀಳಲಿದೆ. ಹೀಗಾಗಿ ನಾನು ದೇಶ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಯೊಬ್ಬರ ಬಳಿ ಹೇಳಿಕೊಂಡಿದ್ದಳು.
ಇನ್‍ಸ್ಟಾಗ್ರಾಮಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನ್ನತ್ ಮಿರ್ಜಾ ಅವರು, ಟಿಕ್‍ಟಾಕ್ ಬ್ಯಾನ್ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಒಂದು ಪೋಸ್ಟ್ ಹಾಕಿದ್ದಳು. ಇದರಿಂದ ಅಭಿಮಾನಿಯೊಬ್ಬ ಈಗ ಏನೂ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದ. ಇದಕ್ಕೆ ಉತ್ತರಿಸಿದ್ದ ಜನ್ನತ್ ಪಾಕಿಸ್ತಾನ ಒಂದು ಸುಂದರ ರಾಷ್ಟ್ರ ಆದರೆ ಪಾಕಿಸ್ತಾನದಲ್ಲಿರುವ ಜನರ ಮನಸ್ಥಿತಿ ಸರಿಯಿಲ್ಲ. ನಾನು ದೇಶ ಬಿಡುತ್ತೇನೆ ಎಂದು ಹೇಳಿದ್ದರು.
https://www.instagram.com/p/CEHP6nNAL9_/
ಸೋಮವಾರ ಮಾತನಾಡಿದ ಪಾಕಿಸ್ತಾನ ಟೆಲಿಕಮ್ಯೂನಿಕೇಷನ್ ಅಥಾರಿಟಿ (ಪಿಟಿಎ) ವಕ್ತಾರ, ಟಿಕ್‍ಟಾಕ್ ಸ್ಥಳೀಯ ನಿಯಮಗಳನ್ನು ಪಾಲಿಸೋದಾಗಿ ಒಪ್ಪಿಕೊಂಡಿದೆ. ಜೊತೆಗೆ ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಲು ಸಮ್ಮತಿಸಿದೆ. ಇನ್ಮುಂದೆ ಪಾಕಿಸ್ತಾನದಲ್ಲಿ ಲಭ್ಯವಿರುವ ಟಿಕ್‍ಟಾಕ್ ನಲ್ಲಿ ಅಶ್ಲೀಲ ಮತ್ತು ಕಾನೂನುಬಾಹಿರ ದೃಶ್ಯಗಳು ಪ್ರಸಾರವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
https://www.instagram.com/p/CC6Br72gt7m/
ಈಗ ದೇಶ ಬಿಡಲು ಸಿದ್ಧವಾಗಿದ್ದ ಮಾಡೆಲ್ ಜನ್ನತ್ ಮಿರ್ಜಾ ಅವರಿಗೆ ಪಾಕ್ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಈಗ ಟಿಕ್‍ಟಾಕ್ ಪಾಕಿಸ್ತಾನದಲ್ಲಿ ಲಭ್ಯವಿದೆ ಈಗ ದೇಶವನ್ನು ಬಿಡುವ ಯೋಜನೆ ಇದಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜನ್ನತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
https://www.instagram.com/p/CClWLbrA4ob/