ಟಾಲೆಸ್ಟ್ ಲೀಡರ್‌ಗಳ ಬಗ್ಗೆ ಹೇಳಿಕೆ ನೀಡುವುದನ್ನು ಎಲ್ಲರೂ ನಿಲ್ಲಿಸಿ: ಶ್ರೀರಾಮುಲು

Public TV
2 Min Read
B Sriramulu

ಚಿತ್ರದುರ್ಗ: ಮಾಜಿ ಪ್ರಧಾನ ಮಂತ್ರಿಗಳಾದ ನೆಹರು ಹಾಗೂ ವಾಜಪೇಯಿ ಅವರ ಬಗ್ಗೆ ಹೇಳಿಕೆ ನೀಡುವುದನ್ನು ಸ್ವಪಕ್ಷ ಹಾಗೂ ವಿಪಕ್ಷದವರು ಕೂಡಲೇ ನಿಲ್ಲಿಸಬೇಕು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ವಪಕ್ಷದ ವಿರುದ್ಧವೇ ಛಾಟಿ ಬೀಸಿದ್ದಾರೆ.

ಚಿತ್ರದುರ್ಗದ ಪೊಲೀಸ್ ಕವಾಯತು ಮೈಧಾನದಲ್ಲಿ ಇಂದು 75 ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರು ಹಾಗೂ ವಾಜಪೇಯಿ ಇಬ್ಬರು ಕೂಡ ಪ್ರಧಾನಿಗಳಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಮೊರಾರ್ಜಿದೇಸಾಯಿ ಸಂಪುಟದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದ ವೇಳೆ ತೆರವುಗೊಂಡಿದ್ದ ನೆಹರು ಪ್ರತಿಮೆಯನ್ನು ಪುನಃ ಅದೇ ಸ್ಥಳದಲ್ಲಿ ಪ್ರತಿಷ್ಟಾಪಿಸಿದಂತಹ ವ್ಯಕ್ತಿ. ಹಾಗಾಗಿ ಇಬ್ಬರು ಮಹಾನ್ ನಾಯಕರ ಬಗ್ಗೆ ಪ್ರತಿದಿನ ಹೇಳಿಕೆಗಳನ್ನು ನೀಡುವುದರಿಂದ ಗಲಾಟೆ ಹಾಗೂ ಘರ್ಷಣೆಗಳು ಸೃಷ್ಟಿಯಾಗುತ್ತವೆ. ಅಲ್ಲದೇ ಟಾಲೇಶ್ಟ್ ಲೀಡರ್‍ಗಳ ಬಗ್ಗೆ ಮಾತನಾಡಲು ಇಂದಿನ ಯಾರಿಗೂ ಸಹ ಅರ್ಹತೆ ಇಲ್ಲ. ಆದ್ದರಿಂದ ಕಾಂಗ್ರೇಸ್ ಸೇರಿದಂತೆ ಯಾರು ಕೂಡ ಅವರುಗಳ ಬಗ್ಗೆ ಮಾತನಾಡಬಾರದು. ಅಲ್ಲದೆ ಅವರ ಬಗ್ಗೆ ಮಾತನಾಡುವಂತಹ ಸಮಕಾಲೀನರು ನಾವುಗಳು ಅಲ್ಲ ಎಂದು ಹೇಳಿದ್ದಾರೆ.

cm basavaraj bommai

ನೆಹರು, ವಾಜಪೇಯಿ ಸೇರಿದಂತೆ ಇನ್ನೂ ಹಲವಾರು ಟಾಲೇಶ್ಟ್ ಲೀಡರ್‍ಗಳು ನಮ್ಮಲ್ಲಿದ್ದಾರೆ. ಅವರುಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಅವರು, ಟೀಕೆಗಳಿಂದ ರಾಜಕೀಯ ಮೌಲ್ಯಗಳು ಉಳಿಯುವುದಿಲ್ಲ. ಹಾಗಾಗಿ ಟೀಕೆಗಳನ್ನು ನಿಲ್ಲಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಪ್ರತಿಭಟನಾಕಾರರಿಗೆ ವಚನದ ಮೂಲಕ ಟಾಂಗ್ ಕೊಟ್ಟ ಶಶಿಕಲಾ ಜೊಲ್ಲೆ

Sriramulu Shivamogga medium

ಇದೇ ವೇಳೆ ಅಧಿಕಾರ ಕಳೆದು ಕೊಂಡ ಕೆಲ ಜನರು ಸರ್ಕಾರ ಪತನ ಆಗಲಿದೆ ಎಂದು ಹೇಳುವ ಮೂಲಕ ಕನಸ್ಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹಾಗೂ ಅತಿವೃಷ್ಟಿಯ ಪರಿಸ್ಥತಿಯಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದ ನಂತರ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ನಮ್ಮದೆ ಪಕ್ಷ ಅಧಿಕಾರದಲ್ಲಿ ಇರುತ್ತೇ ಅಲ್ಲದೆ 2023 ರಲ್ಲೂ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

bjp cng

ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಕುರಿತು ಪ್ರತಿಕ್ರಿಯೇ ನೀಡಿದ ಅವರು, ಸ್ವಾರ್ಥತೆ ಇಂದು ಹೆಸರು ಬದಲಾವಣೆ ಮಾಡಿಲ್ಲ. ಪ್ರತಿಯೊಬ್ಬರಿಗೂ ಊಟ ಮಾಡಲು ಅನ್ನ ಬೇಕಾಗಿರುವುದರಿಂದ ಇಂದಿರಾ ಕ್ಯಾಂಟೀನ್‍ಗೆ ಶ್ರೀಅನ್ನಪೂರ್ಣೇಶ್ವರಿ ದೇವರ ಹೆಸರು ಬಳಸಲಾಗಿದೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ಹೆಸರು ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

mys indira canteen

ನನಗೆ ಕೊಟ್ಟಿರುವ ಖಾತೆಯ ಬಗ್ಗೆ ನನಗೆ ಸಮಾಧಾನ ಇದೆ. ಜನಸೇವೆ ನನ್ನ ಧ್ಯೇಯ. ಕಾಯ, ವಾಚ, ಮನಸ್ಸಿನಿಂದ ಕೆಲಸ ಮಾಡುತ್ತೇನೆ ಈ ಬಗ್ಗೆ ಗೊಂದಲ ಬೇಡ. ಸಚಿವ ಸ್ಥಾನ ನೀಡುವಾಗ ಕೆಲವರಲ್ಲಿ ಅಸಮಧಾನ ಸಹಜ. ನಾಯಕರು ಅಸಮಧಾನಗೊಂಡಿರುವ ಶಾಸಕರನ್ನು ಸಮಾಧಾನ ಮಾಡುವ ಕೆಲಸ ಮಾಡಲಿದ್ದಾರೆ. ಸೂಕ್ತ ಸಮಯದಲ್ಲಿ ಅಸಮಧಾನಗೊಂಡಿರುವ ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *