ಹೈದರಾಬಾದ್: ಟಾಲಿವುಡ್ ನಟ ಸೂಪರ್ ಸ್ಟಾರ್ ಮಹೇಶ್ ಬಾಬು ಹಳ್ಳಿ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ.
Advertisement
ಮೇ 31ರಂದು ಮಹೇಶ್ ಬಾಬುರವರು ತಮ್ಮ ತಂದೆ ಸೂಪರ್ ಸ್ಟಾರ್ ಕೃಷ್ಣರವರ ಹುಟ್ಟು ಹಬ್ಬದ ಪ್ರಯುಕ್ತ ಆಂಧ್ರಪ್ರದೇಶದಲ್ಲಿರುವ ತಮ್ಮ ಸ್ವಂತ ಗ್ರಾಮ ಬುರೀಪಲೇಮ್‍ನ ಜನರಿಗೆ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಿದ್ದಾರೆ.
Advertisement
Happy birthday Nanna.. Thank you for always showing me the best way forward.. Love you more than you’ll ever know ♥️♥️♥️ pic.twitter.com/Mm3J0OA8by
— Mahesh Babu (@urstrulyMahesh) May 30, 2021
Advertisement
2015ರ ಶ್ರೀಮಂತುಡು ಸಿನಿಮಾದ ವೇಳೆ ಬುರಿಪಲೇಮ್ ಗ್ರಾಮವನ್ನು ಮಹೇಶ್ ಬಾಬುರವರು ದತ್ತು ಪಡೆದಿದ್ದರು. ಸದ್ಯ ಕೊರೊನಾ ಸಂಕಷ್ಟದ ಸಮಯದಲ್ಲಿ ಗ್ರಾಮದ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದು, ಈ ಕುರಿತಂತೆ ಮಹೇಶ್ ಬಾಬುರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಲವೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ: ವಿದೇಶದಲ್ಲಿ ದುಬಾರಿ ಕಾರ್ ಖರೀದಿ ಮಾಡಿದ ಸೀರಿಯಲ್ ನಟಿ
Advertisement
Vaccination is our ray of hope for a normal life again! Doing my bit to ensure everyone in Burripalem is vaccinated and safe. Extremely grateful to #AndhraHospitals for helping us arrange this vaccination drive. pic.twitter.com/n4CXbzrN9X
— Mahesh Babu (@urstrulyMahesh) May 31, 2021
ಫೋಟೋ ಜೊತೆಗೆ ವ್ಯಾಕ್ಸಿನೇಷನ್‍ನಿಂದ ಮತ್ತೆ ಸಾಮಾನ್ಯ ಜೀವನ ಆರಂಭವಾಗುತ್ತದೆ ಎಂಬುವುದು ನಮ್ಮ ಭರವಸೆ. ಬುರಿಪಲೇಮ್‍ನಲ್ಲಿರುವ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿ ಸುರಕ್ಷಿಗೊಳಿಸಲು ನಾನು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಈ ವ್ಯಾಕ್ಸಿನೇಷನ್ ಡ್ರೈವ್ ವ್ಯವಸ್ಥೆಗೊಳಿಸಲು ಸಹಾಯ ಮಾಡಿದ ಆಂಧ್ರ ಆಸ್ಪತ್ರೆಗಳಿಗೆ ಬಹಳ ಧನ್ಯವಾದಗಳು. ಇದನ್ನು ಓದಿ: RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್
ಈ ಅಭೂತಪೂರ್ವ ಸಮಯದಲ್ಲಿ ಕಾರ್ಯನಿರ್ವಹಿಸಿದ ಫ್ರಂಟ್ ಲೈನ್ ವಾರಿಯರ್ಸ್ ಹಾಗೂ ಲಸಿಕೆಯ ಮಹತ್ವವನ್ನು ಅರಿತು ಮುಂದೆ ಬಂದು ತಮ್ಮ ಲಸಿಕೆ ಪಡೆದ ಗ್ರಾಮಸ್ಥರಿಗೆ ನಿಜವಾಗಲೂ ಪ್ರಶಂಸಿಸುತ್ತೇನೆ. ಲಸಿಕೆ ಪಡೆಯಿರಿ, ಎಲ್ಲರೂ ಸುರಕ್ಷಿತವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.
Special mention to @MBofficialTeam for volunteering on the frontlines during these unprecedented times. ???????????? Really appreciate all the villagers for understanding the importance of vaccines and coming forward to get their shot. Get vaccinated! Stay safe everyone ????
— Mahesh Babu (@urstrulyMahesh) May 31, 2021
ಒಟ್ಟಾರೆ ಸೂಪರ್ ಸ್ಟಾರ್ ಮಹೇಶ್ ಬಾಬುವಿನಂತೆ ಪ್ರತಿ ಸ್ಟಾರ್ ನಟರು ಒಂದೊಂದು ಹಳ್ಳಿಯ ಜನರಿಗೆ ವ್ಯಾಕ್ಸಿನೇಷನ್ ಮಾಡಿಸಿದರೆ, ಕಷ್ಟದ ಸಮಯದಲ್ಲಿ ಹಳ್ಳಿ ಜನರಿಗೆ ಸಹಕಾರಿ ಆಗುತ್ತದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.