– ಇಂದು 435 ಪಾಸಿಟಿವ್, 973 ಜನ ಡಿಸ್ಚಾರ್ಜ್
ಬೆಂಗಳೂರು : ದೇಶಾದ್ಯಂತ ವ್ಯಾಕ್ಸಿನೇಷನ್ ಆರಂಭವಾಗಿ ಇವತ್ತಿಗೆ ಮೂರನೇ ದಿನ. ಮೂರನೇ ದಿನವಾದ ಇಂದು ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಫತ್ರೆಯ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನ ನಡೆದಿದೆ. ಇವತ್ತು ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆದವರ ಸಂಖ್ಯೆ ಶೇ.50 ಸಹ ದಾಟಲಿಲ್ಲ. ಸಂಜೆ 5.30ರ ಹೊತ್ತಿಗೆ ಶೇ.47 ರಷ್ಟು ಮಂದಿ ಲಸಿಕೆ ಹಾಕಿಸಿದ್ದಾರೆ.
ಇಂದು ಒಂದು ಸಾವಿರ ಲಸಿಕಾ ಕೇಂದ್ರದಲ್ಲಿ ವ್ಯಾಕ್ಸಿನೇಷನ್ ಕ್ಯಾಂಪೇನ್ ನಡೆಯಿತು. ಇವತ್ತು ಒಂದೇ ಸಾವಿರ ಕೇಂದ್ರಗಳಲ್ಲಿ 81,219 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಬೇಕೆಂದು ಟಾರ್ಗೆಟ್ ನಿಗದಿ ಮಾಡಲಾಗಿತ್ತು. ಆದರೆ ಸಂಜೆ ವೇಳೆಗೆ ಟಾರ್ಗೆಟ್ ನೀಡಿದ್ದ ಸಂಖ್ಯೆಯಲ್ಲಿ ಅರ್ಧದಷ್ಟು ಜನ ಲಸಿಕೆಯನ್ನ ಪಡೆದಿದ್ದಾರೆ. 81,169 ರಲ್ಲಿ 38,242 ಆರೋಗ್ಯ ಕಾರ್ಯಕರ್ತರು ಮಾತ್ರ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.
Advertisement
Advertisement
ಲಸಿಕೆ ಪಡೆಯುವವರ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ಶನಿವಾರ ಶೇ.63, ಭಾನುವಾರ ಶೇ.58 ಮಂದಿ ಲಸಿಕೆ ಪಡೆದಿದ್ದರು. ಜಿಲ್ಲೆಗಳ ಪೈಕಿ ಅತಿ ಹೆಚ್ಚು ಬೆಳಗಾವಿ 30(ಶೇ.73), ಚಿಕ್ಕಬಳ್ಳಾಪುರ 2,167(ಶೇ.73), ತುಮಕೂರು 3,185(ಶೇ.71) ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 5,296(ಶೇ.28) ಮಂದಿ ಲಸಿಕೆ ಪಡೆದಿದ್ದಾರೆ.
Advertisement
Advertisement
ಇಂದು ಕರ್ನಾಟಕದಲ್ಲಿ 435 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 973 ಜನ ಡಿಸ್ಚಾರ್ಜ್ ಆಗಿದ್ದಾರೆ. 9 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,32,432ಕ್ಕೆ ಏರಿಕೆ ಆಗಿದೆ. ಈ ಪೈಕಿ 9,12,205 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,033 ಸಕ್ರಿಯ ಪ್ರಕರಣಗಳಿವೆ.
ಒಟ್ಟು ಇಲ್ಲಿಯವರೆಗೆ 12,175 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 177 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 2,823 ಆಂಟಿಜನ್ ಟೆಸ್ಟ್, 66,442 ಆರ್‌ಟಿ ಪಿಸಿಆರ್ ಸೇರಿದಂತೆ ಒಟ್ಟು 69,265 ಪರೀಕ್ಷೆ ಮಾಡಲಾಗಿದೆ.
ಎಂದಿನಂತೆ ಬೆಂಗಳೂರು ನಗರದಲ್ಲಿ 193 ಮಂದಿಗೆ ಸೋಂಕು ಬಂದಿದೆ. ಮೈಸೂರು 35, ತುಮಕೂರು 26, ಶಿವಮೊಗ್ಗ 16, ಚಿಕ್ಕಬಳ್ಳಾಪುರದಲ್ಲಿ 14 ಮಂದಿಗೆ ಸೋಂಕು ಬಂದಿದೆ. ಒಟ್ಟು 177 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 74, ಕಲಬುರಗಿ 11, ಮಂಡ್ಯದಲ್ಲಿ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.