ಬೆಂಗಳೂರು: ಕೆಲವು ದಿನಗಳಿಂದ ಹಾಸ್ಯನಟ ಚಿಕ್ಕಣ್ಣ ಮತ್ತು ‘ಟಗರು’ ಸಿನಿಮಾ ಖ್ಯಾತಿಯ ತ್ರಿವೇಣಿ ರಾವ್ ಅವರಿಗೆ ವಿವಾಹವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ನಟಿ ತ್ರಿವೇಣಿ ರಾವ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಟಿ ತ್ರಿವೇಣಿ ರಾವ್ ‘ಟಗರು’ ಸಿನಿಮಾದಲ್ಲಿ ಸರೋಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಅಂದಿನಿಂದ ಟಗರು ಸರೋಜ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಚಿಕ್ಕಣ್ಣ ಮತ್ತು ಟಗರು ಸರೋಜ ವಧು-ವರರ ಉಡುಪಿನಲ್ಲಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ನೋಡಿ ಇವರಿಬ್ಬರಿಗೂ ಮದುವೆಯಾಗಿದೆ ಎಂದು ಅನೇಕರು ಶುಭಾಶಯ ಕೋರುತ್ತಿದ್ದರು. ಇದೀಗ ಈ ಸುದ್ದಿ ಸುಳ್ಳು ಎಂದು ಟಗರು ಸರೋಜ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
“ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಟಗರು ಸಿನಿಮಾದ ಸರೋಜ ಮಾತನಾಡುತ್ತಿದ್ದೇನೆ. ಇದೇ ತಿಂಗಳು ಚಿಕ್ಕಣ್ಣ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಬರ್ತ್ ಡೇ ದಿನ ನಾನು ಒಂದು ಪೋಸ್ಟ್ ಶೇರ್ ಮಾಡಿದ್ದೆ. ಆ ಫೋಸ್ಟ್ ನಿಂದ ನನಗೆ ಮತ್ತು ಚಿಕ್ಕಣ್ಣ ಅವರಿಗೆ ಮದುವೆಯಾಗಿದೆ ಎಂಬ ಸುಳ್ಳು ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಅಲ್ಲದೇ ಟಿಕ್‍ಟಾಕ್‍ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ನನಗೆ ಮತ್ತು ಅವರಿಗೆ ಅಧಿಕೃತವಾಗಿ ಮದುವೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
https://www.instagram.com/p/CB9k7DjgMUf/?igshid=2x7ucns55c3k
ಇದು ಸಿನಿಮಾದಲ್ಲಿ ಬರುವ ಒಂದು ದೃಶ್ಯವಾಗಿದೆ. ಹೀಗಾಗಿ ಇದನ್ನು ಯಾರು ನಂಬಬೇಡಿ. ಖಂಡಿತಾ ನನಗೆ ಮದುವೆ ನಿಶ್ಚಯವಾದಾಗ ನಿಮ್ಮೆಲ್ಲರಿಗೂ ಅಧಿಕೃತವಾಗಿ ಹೇಳಿ ನಾನು ಮದುವೆಯಾಗುತ್ತೀನಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ಇರಬೇಕು. ಎಲ್ಲರೂ ಮನೆಯಲ್ಲಿರಿ, ಸುರಕ್ಷಿತವಾಗಿರಿ” ಎಂದು ಮನವಿ ಮಾಡಿಕೊಂಡರು.
ಅಷ್ಟೇ ಅಲ್ಲದೇ ಟ್ರೋಲ್ ಮಾಡಿರುವ ಫೋಟೋವನ್ನು ಪೋಸ್ಟ್ ಮಾಡಿ, “ನಾನು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲ. ಇದು ಸಿನಿಮಾವೊಂದರ ದೃಶ್ಯವಾಗಿದೆ. ದಯವಿಟ್ಟು ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ” ಎಂದು ಬರೆದುಕೊಂಡಿದ್ದಾರೆ.
https://www.instagram.com/p/CB9kf9CACyE/?igshid=gyi2i0xlpbkd