ಬೆಂಗಳೂರು: ಮಾಡೆಲ್ ಹಿತೇಶಾ ಚಂದ್ರಾನೀ ಮತ್ತು ಝೋಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಿತೇಶಾ ಚಂದ್ರಾನೀ, ನಾನು ನನ್ನ ಸುರಕ್ಷತೆಯ ಬಗ್ಗೆ ಚಿಂತೆಗೊಳಗಾಗಿದ್ದೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
Advertisement
ಮಾರ್ಚ್ 9 ರಂದು ಡೆಲಿವರಿ ಬಾಯ್ ಮತ್ತು ಮಾಡೆಲ್ ನಡುವೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿತ್ತು. ದೊಡ್ಡತಗೂರು ಪ್ರದೇಶದ ಯುವತಿ ಹಿತೇಶಾ ಚಂದ್ರಾನೀ ಝೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಅದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ನೀಡಿರುವ ದೂರಿನ ಮೇರೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ಪೊಲೀಸರು ಸೆಕ್ಷನ್ 355 (ದಾಳಿ), 504 (ಅವಮಾನ), 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
Advertisement
View this post on Instagram
Advertisement
ಇದೀಗ ಇನ್‍ಸ್ಟಾಗ್ರಾಂ ನಲ್ಲಿ ಪತ್ರದ ಮೂಲಕ ಬರೆದುಕೊಂಡಿರುವ ಹಿತೇಶಾ ಚಂದ್ರಾನೀ, ಕೆಲವು ಸೆಲೆಬ್ರಿಟಿಗಳು ಈ ಘಟನೆಗೆ ನಾನೇ ಕಾರಣವೆಂದು ಮನಸ್ಸು ನೋಯಿಸಿದ್ದಾರೆ. ಇದರಿಂದಾಗಿ ನನಗೆ ನಾನು ನೋಡಿದ್ದ ಜನರು ಇವರೇನಾ ಎಂಬ ಸಂಶಯ ಮೂಡುತ್ತಿದೆ ಎಂದಿದ್ದಾರೆ.
Advertisement
ನಾನು ನನ್ನ ಜೀವನವನ್ನು ಮತ್ತು ಗೌರವವನ್ನು ಯಾವುದೇ ಅಪಾಯಕ್ಕೆ ಒಳಪಡಿಸಲು ಇಷ್ಟ ಪಡುವುದಿಲ್ಲ. ಸೂಕ್ತವಾದ ಕಾನೂನು ಹೋರಾಟ ಮುಗಿಯುವವರೆಗೆ ಯಾರು ಕೂಡ ಈ ಕುರಿತು ಹೇಳಿಕೆಗಳನ್ನು ನೀಡಬಾರದೆಂದು ಅಭಿಮಾನಿಗಳೊಂದಿಗೆ ವಿನಂತಿ ಮಾಡಿಕೊಂಡಿದ್ದಾರೆ.
ಈಗಾಗಲೇ ನಾನು ಬೆಂಗಳೂರು ಬಿಟ್ಟು ಹೋಗಿದ್ದೇನೆಂಬ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ನಾನು ಎಲ್ಲೂ ಹೋಗಿಲ್ಲ. ನಾನು ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದು, ಕಳೆದ ಮೂರು ನಾಲ್ಕು ದಿನಗಳಿಂದ ನನ್ನ ಸುರಕ್ಷತೆಯ ಬಗ್ಗೆ ಚಿಂತೆಗೊಳಗಾಗಿದ್ದೇನೆ. ತನಿಖೆಯ ಸತ್ಯಾಸತ್ಯತೆ ಹೊರ ಬರುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.