ಬಳ್ಳಾರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಒಟ್ಟು ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು.
Advertisement
ಕಂಪ್ಲಿಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಒಟ್ಟು 155 ಮಕ್ಕಳಿಗೆ 78 ಟ್ಯಾಬ್ ಗಳನ್ನು ಹಾಗೂ ಚಿಕ್ಕಜಾಯಿಗನೂರು ಶಾಲೆಯ ಸರ್ಕಾರಿ ಪ್ರೌಢ ಶಾಲೆಯ ಒಟ್ಟು 38 ಮಕ್ಕಳಿಗೆ 19 ಟ್ಯಾಬ್ ಗಳನ್ನು ಹಾಗೂ ಬಾಲಕಿಯರ ಪ್ರೌಢ ಶಾಲೆ ಕಂಪ್ಲಿಯ ಶಾಲೆಯ ಒಟ್ಟು 208 ಮಕ್ಕಳಿಗೆ 104 ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುನಂದಾ ಅವರು ಭಾಗವಹಿಸಿ, ಪಬ್ಲಿಕ್ ಟಿವಿ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯ ಹೊಸಪೇಟೆ ಹಾಗೂ ಕಂಪ್ಲಿ ತಾಲೂಕಿನ ಪ್ರತಿ ಮಕ್ಕಳಿಗೆ ಟ್ಯಾಬ್ ಗಳನ್ನು ಪಬ್ಲಿಕ್ ಟಿವಿ ನೀಡಿದೆ. ಅವರ ಈ ಕಾರ್ಯ ಮಕ್ಕಳ ಬಾಳಲ್ಲಿ ಒಂದು ಹೊಸ ಹುಮ್ಮಸ್ಸು ತರಿಸಿದೆ. ಪಬ್ಲಿಕ್ ಟಿವಿ ಅವರು ಮತ್ತಷ್ಟು ಇದೇ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವಂತೆ ಸುನಂದಾ ಹಾರೈಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಟ್ಯಾಬ್ ಗಳನ್ನು ಮೂರು ಶಾಲೆಯ ಮಕ್ಕಳಿಗೆ ನೀಡಲಾಯಿತು. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಬಿದ್ದಿದ್ದು ಉಳಿದ ದಿನಗಳನ್ನು ಈ ಟ್ಯಾಬ್ ನೋಡಿಕೊಂಡು ಉತ್ತಮ ಫಲಿತಾಂಶ ತರುತ್ತೇವೆ ಎಂದು ಮಕ್ಕಳ ಹೇಳಿದ್ದಾರೆ.