ಚಿತ್ರದುರ್ಗ: ಜಿಲ್ಲೆಯ ಹೊರವಲಯದಲ್ಲಿರುವ ಶ್ರೀ ಮಾದಾರಚನ್ನಯ್ಯ ಗುರುಪೀಠದಲ್ಲಿ ಪಬ್ಲಿಕ್ ಟಿವಿ, ರೋಟರಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ 127 ಟ್ಯಾಬ್ ಗಳನ್ನು 257 ಜನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ, ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ವಿತರಣೆ ಮಾಡಿದರು.
Advertisement
ಶ್ರೀ ಮಾದಾರಚನ್ನಯ್ಯ ಗುರುಪೀಠದಲ್ಲಿ ನಡೆದ ಕಾರ್ಯಕ್ರಮವನ್ನು ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿ ಅವರು, ಟಿಆರ್‍ಪಿಗಾಗಿ ಬಡಿದಾಡುವ ಇಂದಿನ ಮಾಧ್ಯಮ ಲೋಕದಲ್ಲಿ ಪಬ್ಲಿಕ್ ಟಿವಿ ವಿಭಿನ್ನವಾಗಿದೆ. ಸತತ ಎರಡು ವರ್ಷಗಳಿಂದ ಕೋವಿಡ್ ಭೀತಿಯಿಂದಾಗಿ ವಿದ್ಯಾರ್ಥಿಗಳು ಪಂಜರದ ಗಿಳಿಗಳಾಗಿದ್ದರು. ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ನಡೆದರೂ ಮೊಬೈಲ್ ಖರೀದಿಸಲಾಗದಷ್ಟು ಕಡು ಬಡವರಾಗಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಉಚಿತ ಟ್ಯಾಬ್ ವಿತರಣೆಯ ಜ್ಞಾನದೀವಿಗೆ ಕಾರ್ಯಕ್ರಮ ಆಯೋಜಿಸಿದೆ. ಕೊರೊನಾ ಸಂಕಷ್ಟದ ವೇಳೆ ಶಾಲೆಗಳು ಓಪನ್ ಆಗದೇ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯೋದು ಹೇಗೆಂಬ ಆತಂಕದಲ್ಲಿದ್ದರು. ಈ ವೇಳೆ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ರಾಜ್ಯದಲ್ಲೇ ವಿಶೇಷ ಟ್ಯಾಬ್ ಆಂದೋಲನ ನಡೆಸಿದೆ. ಇಂತಹ ಸಾಮಾಜಿಕ ಕಾರ್ಯಗಳಿಗೆ ಶ್ರೀಮಠ ಸಹ ನಿರಂತರವಾಗಿ ನೆರವಾಗಲಿದೆ. ಹೀಗಾಗಿ ಚಿತ್ರದುರ್ಗದ ಕೊಡುಗೈ ದಾನಿಗಳು ಕೂಡ ಇಂತಹ ಅಪರೂಪದ ಮಹತ್ಕಾರ್ಯಗಳಿಗೆ ನೆರವಾಗಬೇಕಿದೆ. ಉಚಿತ ಟ್ಯಾಬ್ ವಿತರಿಸುತ್ತಿರುವ ಪಬ್ಲಿಕ್ ಟಿವಿ ಹಾಗೂ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ಹೇಳಿದರು.
Advertisement
Advertisement
ಇದೇ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಈಶ್ವರಪ್ಪನವರು, ಪಬ್ಲಿಕ್ ಟಿವಿ ಕಾರ್ಯವನ್ನು ಶ್ಲಾಘಿಸಿದ್ದೂ, ಈ ಜ್ಞಾನದೀವಿಗೆ ಕಾರ್ಯಕ್ರಮವು ಕೋವಿಡ್ ಸಂಕಷ್ಟದ ವೇಳೆ ಪಾಠ ಕೇಳಲಾಗದೇ ಸಂಕಷ್ಟಕ್ಕೀಡಾಗಿದ್ದ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಭೌತಿಕ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
Advertisement
ರೋಟರಿ ಪೋರ್ಟ್ ಸಂಸ್ಥೆಯ ಮುಖ್ಯಸ್ಥರಾದ ರವಿಂದ್ರರವರು, ಟ್ಯಾಬ್ ಗಳ ಬಳಕೆ ಹಾಗೂ ಟ್ಯಾಬ್ ನ ವೈಶಿಷ್ಡ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದನ್ನೂ ಓದಿ: ಜ್ಞಾನದೀವಿಗೆ ಅಭಿಯಾನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಕಾರಿ: ಸುರೇಶ್ ಕುಮಾರ್
ಟ್ಯಾಬ್ ಪಡೆದ ವಿದ್ಯಾರ್ಥಿನಿ ವರ್ಷಾ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಎದುರಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೇಗೆ ಬರೆಯುವುದು ಎಂಬ ಆತಂಕದಲ್ಲಿದ್ದ ನಮಗೆ ಈ ಉಚಿತ ಟ್ಯಾಬ್ ಸಹಕಾರಿಯಾಗಿದೆ. ಆನ್‍ಲೈನ್ ಕ್ಲಾಸ್ ನಡೆದರು, ಮೊಬೈಲ್ ಖರೀದಿಸುವಷ್ಟು ಹಣವಿರಲಿಲ್ಲ. ಟಿವಿಗಳಲ್ಲಿ ಪಾಠ ಕೇಳಲು ಕರೆಂಟ್ ಸಮಸ್ಯೆ ತಲೆದೂರಿತ್ತು. ಇಂತಹ ವೇಳೆ ನಮಗೆ ಪಬ್ಲಿಕ್ ಟಿವಿ ನೀಡಿರುವ ಟ್ಯಾಬ್‍ಗಳ ನೆರವಿನಿಂದ ಉತ್ತಮ ಅಂಕ ಗಳಿಸಿ, ಶಾಲೆಗೆ ಹಾಗೂ ಚಿತ್ರದುರ್ಗಕ್ಕೆ ಒಳ್ಳೆಯ ಹೆಸರು ತರುತ್ತೇವೆಂದು ಭರವಸೆ ನೀಡಿದರು.
ಟ್ಯಾಬ್ ಪಡೆದು ನೂರಕ್ಕೆ ನೂರು ಅಂಕ ಗಳಿಸುವ ವಿದ್ಯಾರ್ಥಿಗೆ 25,000 ರೂ. ಘೋಷಣೆ
ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಪದಕ ಪುರಸ್ಕೃತ ಗೃಹ ರಕ್ಷಕದಳದ ಕಮಾಂಡರ್ ಕಾಂತರಾಜ್ ಭಾಗಿಯಾಗಿದ್ದೂ, ಟ್ಯಾಬ್ ಪಡೆದ ವಿದ್ಯಾರ್ಥಿಗಳಲ್ಲಿ ಯಾರಾದರು ನೂರಕ್ಕೆ ನೂರರಷ್ಟು ಅಂಕ ಗಳಿಸಿದರೆ ಆ ವಿದ್ಯಾರ್ಥಿಗೆ ತಮ್ಮ ಇಲಾಖೆ ನೀಡುವ ಗೌರವ ಧನದಿಂದ 25,000 ರೂಪಾಯಿ ನೀಡಲಾಗುವುದು ಎಂದು ಘೋಷಿಸಿದರು. ರೋಟರಿ ಸಂಸ್ಥೆ ಪದಾಧಿಕಾರಿಗಳಾದ, ಮಾರುತಿಮೋಹನ್, ಮಠದ ಮುಖ್ಯಸ್ಥರಾದ ರವಿಮಲ್ಲಾಪುರ, ವೀರೇಂದ್ರ ಹಾಗೀ, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.