– 300 ಟ್ಯಾಬ್‍ಗಳಿಗೆ ಹಣ ನೀಡಿದ ಉದ್ಯಮಿ
– ಗೌರಿಬಿದನೂರು ಕ್ಷೇತ್ರದ ವಿದ್ಯಾರ್ಥಿಗಳಿಗೆ ಟ್ಯಾಬ್
ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ ರೋಟರಿ ಸಂಸ್ಥೆ ಸಹಯೋಗದೊಂದಿಗೆ ನಡೆಸುತ್ತಿರುವ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆಯ ‘ಜ್ಞಾನದೀವಿಗೆ’ ಮಹಾಯಜ್ಞಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಗೌರಿಬಿದನೂರಿನ ಏಷಿಯನ್ ಫ್ಯಾಬ್ ಟೆಕ್ ಸೋಲಾರ್ ಪ್ಲಾಂಟ್‍ನ ಉದ್ಯಮಿ ಹಾಗೂ ಸಮಾಜಸೇವಕ ಪುಟ್ಟಸ್ವಾಮಿಗೌಡ ಅವರು 10.48 ಲಕ್ಷ ರೂ.ಗಳನ್ನು ನೀಡಿದ್ದಾರೆ.
Advertisement
ಜಿಲ್ಲೆಯ ಗೌರಿಬಿದನೂರಿನ ಏಷಿಯನ್ ಫ್ಯಾಬ್ ಟೆಕ್ ಸೋಲಾರ್ ಪ್ಲಾಂಟ್ ನ ಉದ್ಯಮಿ ಹಾಗೂ ಸಮಾಜಸೇವಕರಾದ ಪುಟ್ಟಸ್ವಾಮಿಗೌಡರು 300 ಟ್ಯಾಬ್ ಗಳಿಗೆ ಬೇಕಾಗುವ 10,48,500 ರೂಪಾಯಿಗಳ ಚೆಕ್‍ನ್ನು ಪಬ್ಲಿಕ್ ಟಿವಿಗೆ ಹಸ್ತಾಂತರಿಸಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯ ಸಮಾಜಮುಖಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಪುಟ್ಟಸ್ವಾಮಿಗೌಡರು, ಈ ಟ್ಯಾಬ್‍ಗಳನ್ನು ಗೌರಿಬಿದನೂರು ತಾಲೂಕಿನ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಟ್ಯಾಬ್‍ಗಳು ಸಹಾಯವಾಗಲಿವೆ. ಇದು ಗೌರಿಬಿದನೂರಿನ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಲಿ ಎಂದು ಪುಟ್ಟಸ್ವಾಮಿಗೌಡರು ಆಶಿಸಿದ್ದಾರೆ.