ಜೋ ಬೈಡೆನ್‍ಗೆ ಮೋದಿ ದೂರವಾಣಿ ಕರೆ- ಕೊರೊನಾ, ಕ್ಲೈಮೇಟ್ ಚೇಂಜ್ ಬಗ್ಗೆ ಚರ್ಚೆ

Public TV
1 Min Read
MODI 2

ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದೇನೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ.

ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೆರವಿನ ಭರವಸೆ ನೀಡಿದ್ದು, ಕೋವಿಡ್ 19, ಹವಾಮಾನ ವೈಪರೀತ್ಯ ಕುರಿತು ಮಾತುಕತೆ ನಡೆಸಿದ್ದೇನೆ. ಅಲ್ಲದೆ ಇಂಡೋ- ಫೆಸಿಪಿಕ್ ವಲಯದಲ್ಲಿ ಸಹಕಾರದ ಕುರಿತು ಚರ್ಚೆ ಮಾಡಿದ್ದು, ಇದೇ ವೇಳೆ ಕಮಲಾ ಹ್ಯಾರಿಸ್ ಗೂ ಶುಭಾಶಯ ತಿಳಿಸಿರುವುದಾಗಿ ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿ, ಕಮಲಾ ಹ್ಯಾರಿಸ್ ಗೆಲುವು ಇಂಡೋ-ಅಮೆರಿಕನ್ನರ ಗೆಲುವಾಗಿದೆ. ಕೋವಿಡ್ ಲಸಿಕೆ ಕಂಡುಹಿಡಿಯಲು ಜಂಟಿ ಪಯತ್ನಕ್ಕೆ ಒತ್ತ ನೀಡಬೇಕು ಎಂದು ಕೂಡ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *