– ಪೊಲೀಸ್ ರೀತಿ ಪೋಸ್ ಕೊಡುತ್ತಿದ್ದ ಲಾರಿ ಮಾಲೀಕ
– ಮೊಬೈಲಿನಲ್ಲಿ ಅನೇಕ ಮಹಿಳೆಯರ ಫೋಟೋ, ವಿಡಿಯೋ
ಚೆನ್ನೈ: 35 ವರ್ಷದ ಲಾರಿ ಮಾಲೀಕನೊಬ್ಬ ಪೊಲೀಸ್ ಅಧಿಕಾರಿ ರೀತಿ ಪೋಸ್ ನೀಡುತ್ತಾ ಸುಮಾರು 40ಕ್ಕೂ ಹೆಚ್ಚು ಮಹಿಳೆಯರನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇತ್ತೀಚೆಗೆ ಮಹಿಳೆಯೊಬ್ಬರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಪಿಚೈಮಾನಿ ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಆರೋಪಿ ಪಿಚೈಮಾನಿ ಬ್ಲ್ಯಾಕ್‍ಮೇಲ್ ಮೂಲಕವೇ 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದರಲ್ಲೂ ಪುಜ್ಹಲ್ ಮತ್ತು ರೆಡ್ ಹಿಲ್ಸ್ ಪ್ರದೇಶ ಮಹಿಳೆಯರನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಬಂಧಿತ ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಹಲವಾರು ವಿಡಿಯೋಗಳು ಮತ್ತು ಮಹಿಳೆಯರ ಫೋಟೋಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ.
Advertisement
Advertisement
ಇತ್ತೀಚೆಗೆ ಮಹಿಳೆಯೊಬ್ಬರು ಪುಜ್ಹಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನನ್ನ ಗೆಳೆಯನೊಂದಿಗೆ ಇರುವಾಗ ನನ್ನ ಮೊಬೈಲ್ ಫೋನ್ ಮತ್ತು 15 ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಈ ಕುರಿತು ದೂರು ದಾಖಲಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆಯ ಗೆಳೆಯನನ್ನು ಗುರುತಿಸಲಾಗಿದ್ದು, ಆತ ಮಹಿಳೆಯನ್ನು ಸ್ಥಳದಲ್ಲೇ ಬಿಟ್ಟು ವೇಗವಾಗಿ ಹೋಗುವುದು ಸೆರೆಯಾಗಿದೆ. ಆಗ ಪೊಲೀಸರು ಅನುಮಾನದ ಮೇರೆಗೆ ಮಹಿಳೆಯನ್ನು ವಿಚಾರಿಸಿದ್ದಾರೆ. ಆಗ ಮಹಿಳೆ ನಡೆದ ವಿಚಾರವನ್ನು ಪೊಲೀಸರ ಮುಂದೆ ಹೇಳಿದ್ದಾರೆ. ಆರೋಪಿ ಗೆಳೆಯನೊಂದಿಗಿರುವ ಖಾಸಗಿ ಫೋಟೋಗಳನ್ನು ತೋರಿಸಿ ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದನು. ಅಲ್ಲಿ ಆರೋಪಿ ನನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಅದಕ್ಕೂ ಮೊದಲು ಆರೋಪಿ ನನ್ನ ಫೋನ್ ಮತ್ತು ವಸ್ತುಗಳನ್ನು ಕಸಿದುಕೊಂಡಿದ್ದಾನೆ ಎಂದು ಮಹಿಳೆ ಪೊಲೀಸರು ಮುಂದೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.
ಎರಡು ದಿನಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅನೇಕ ಮಹಿಳೆಯರ ಫೋಟೋವನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ನಾನು ಖಾಕಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ರೆಡ್ ಹಿಲ್ಸ್ ಪ್ರದೇಶಗಳಲ್ಲಿ ವಾಕಿಂಗ್ ಬರುವ ಜೋಡಿಗಳನ್ನೇ ಗುರಿಸಿಯಾಗಿಸಿಕೊಂಡಿದ್ದನು. ಜೋಡಿ ಒಟ್ಟಿಗಿರುವ ಫೋಟೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ನಂತರ ಅವರನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.