ಜೋಕಾಲಿ ಮೇಲೆ ವೃದ್ಧನ ಸ್ಟಂಟ್ – ವೀಡಿಯೋ ನೋಡಿ ಬೆರಗಾದ ನೆಟ್ಟಿಗರು

Public TV
1 Min Read
FotoJet 11 1

ಮಕ್ಕಳೊಂದಿಗೆ ವೃದ್ಧನೊಬ್ಬ ಜೋಕಾಲಿ ಆಡಿದ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಮಕ್ಕಳೊಂದಿಗೆ ಆಟವಾಡಲೆಂದು ಪಾರ್ಕ್‍ಗೆ ವೃದ್ಧ ಬರುತ್ತಾನೆ. ಈ ವೇಳೆ ಮಕ್ಕಳೆಲ್ಲ ಜೋಕಾಲಿ ಮೇಲೆ ಕುಳಿತು ಅವರ ಪಾಡಿಗೆ ಅವರು ಆಟವಾಡುತ್ತಿರುತ್ತಾರೆ. ಆಗ ವೃದ್ಧ ತಾನು ಇದೇ ಮೊದಲ ಬಾರಿಗೆ ಜೋಕಾಲಿ ಜೊತೆ ಆಟವಾಡುತ್ತಿದ್ದೇನೆ ಎಂಬಂತೆ ಕುಳಿತುಕೊಳ್ಳುತ್ತಾನೆ. ಬಳಿಕ ನಿಧಾನವಾಗಿ ಜೋಕಾಲಿ ಆಡಲು ಆರಂಭಿಸುತ್ತಾನೆ. ಈ ವೇಳೆ ನನಗೆ ಜೋಕಾಲಿ ಆಡವುದಕ್ಕೆ ಬರುವುದಿಲ್ಲ ಎಂಬಂತೆ ವೃದ್ಧ ಮೊದಲಿಗೆ ಹಿಂದಕ್ಕೆ ಬಿದ್ದು ನಾಟಕವಾಡುತ್ತಾನೆ.

old man stunt

ಬಳಿಕ ಮತ್ತೆ ಜೋಕಾಲಿ ಮೇಲೆ ಕುಳಿತು ನಿಧಾನವಾಗಿ ಆಟವಾಡಲು ಆರಂಭಿಸಿದ ವೃದ್ಧ ಇದ್ದಕ್ಕಿಂದಂತೆ ವೇಗವಾಗಿ ಜೋಕಾಲಿ ಆಟವಾಡಲು ಶುರುಮಾಡುತ್ತಾನೆ. ಅಲ್ಲದೆ ಇದ್ದಕ್ಕಿದಂತೆ ಜೋಕಾಲಿ ಮೇಲೆ ಸ್ಟಂಟ್‍ನನ್ನೇ ಮಾಡುತ್ತಾನೆ. ಈ ವೇಳೆ ಪಾರ್ಕ್‍ನಲ್ಲಿ ಆಟ ವಾಡುತ್ತಿದ್ದ ಮಕ್ಕಳೆಲ್ಲರೂ ಒಂದು ಕ್ಷಣ ದಿಗ್ಭ್ರಮೆಗೊಂಡು ವೃದ್ಧನನ್ನೇ ನೋಡುತ್ತಾರೆ. ನಂತರ ವೃದ್ಧ ನಿಧಾನವಾಗಿ ಪಾದಗಳನ್ನು ಕೆಳಗೆ ಇಟ್ಟು ಜೋಕಾಲಿಯಿಂದ ಕೆಳಗೆ ಇಳಿದು ಎಲ್ಲರತ್ತ ನೋಡುತ್ತಾ ಕಿರುನಗೆ ಬೀರಿ ಹೊರಟು ಹೋಗುತ್ತಾನೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಹಳ ಕಷ್ಟಕರವಾದ ಸ್ಟಂಟ್‍ನನ್ನು ವೃದ್ಧ ಇಷ್ಟು ಸುಲಭವಾಗಿ ಮಾಡಿದ್ದಾನೆ ಎಂದು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಅಲ್ಲದೆ ಈ ವೀಡಿಯೋಗೆ ಹಲವಾರು ಕಮೆಂಟ್‍ಗಳು ಹರಿದು ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *