ಬೆಂಗಳೂರು: ಮಾಡೆಲ್ ಒಬ್ಬರ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಡೆಲಿವರಿ ಬಾಯ್ ಪರ ಬಾಲಿವುಡ್ ಸಿನಿಮಾ ನಟಿ ಪರಿಣಿತಿ ಚೋಪ್ರಾ ಟ್ವಿಟ್ಟರ್ ನಲ್ಲಿ ಬೆಂಬಲಕ್ಕೆ ನಿಂತಿದ್ದಾರೆ.
Advertisement
ಮಾರ್ಚ್ 9 ರಂದು ಡೆಲಿವರಿ ಬಾಯ್ ಮತ್ತು ಮಾಡೆಲ್ ನಡುವೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿತ್ತು. ದೊಡ್ಡತಗೂರು ಪ್ರದೇಶದ ಯುವತಿ ಹಿತೇಶಾ ಚಂದ್ರಾನೀ ಜೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಅದಾದ ಮರುದಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು.
Advertisement
Advertisement
ಘಟನೆಯ ಬಳಿಕ ಡೆಲಿವರಿ ಬಾಯ್‍ನನ್ನು ಬಂಧಿಸಿದ್ದ ಪೊಲೀಸರು ಜಾಮೀನಿನ ಮೇಲೆ ಅತನನ್ನು ಬಿಡುಗಡೆ ಮಾಡಿದ್ದರು. ಬಿಡುಗಡೆ ನಂತರ ನಡೆದ ಘಟನೆಯ ಕುರಿತು ಡೆಲಿವರಿ ಬಾಯ್ ಕಾಮರಾಜ್, ನಾನು ಯುವತಿ ಮನೆಗೆ ತಲುಪಿದ ನಂತರ ಆಕೆ ಆರ್ಡರ್ ಮಾಡಿದ ಆಹಾರವನ್ನು ಹಸ್ತಾಂತರಿಸಿದೆ. ನಂತರ ಆಹಾರದ ಹಣ ಪಾವತಿ ಮಾಡುತ್ತಾರೆಂದು ಮನೆ ಬಾಗಿಲಿನಲ್ಲಿ ನಿಂತಿದ್ದೆ. ಆಗ ನೀನು ಏಕೆ ಆಹಾರ ತರಲು ತಡ ಮಾಡಿದ್ದು ಹಣ ಪಾವತಿ ಮಾಡುವುದಿಲ್ಲ ಎಂದು ವಾಗ್ವಾದಕ್ಕಿಳಿದಿದ್ದರು. ಎಂಬುದಾಗಿ ಘಟನೆಯ ಕುರಿತು ಪೂರ್ಣ ವಿವರವನ್ನು ತೋಡಿಕೊಂಡಿದ್ದರು. ಇದು ದೇಶದದ್ಯಾಂತ ಭಾರಿ ಚರ್ಚೆಗೆ ಕಾರಣವಾಗಿತ್ತು.
Advertisement
Zomato India – PLEASE find and publicly report the truth.. If the gentleman is innocent (and I believe he is), PLEASE help us penalise the woman in question. This is inhuman, shameful and heartbreaking .. Please let me know how I can help.. #ZomatoDeliveryGuy @zomatoin
— Parineeti Chopra (@ParineetiChopra) March 13, 2021
ಈ ಪ್ರಕರಣ ಕುರಿತು ಇದೀಗ ಪರಿಣಿತಿ ಜೋಪ್ರಾ ಟ್ವಿಟ್ಟರ್ ನಲ್ಲಿ ದಯವಿಟ್ಟು ಜೊಮ್ಯಾಟೋ ಪ್ರಕರಣದ ಸತ್ಯಾಸತ್ಯತೆಯನ್ನು ಪತ್ತೆಮಾಡಿ. ಈ ಯುವಕ ಮುಗ್ಧನಾಗಿದ್ದು ನಾನು ಈ ವ್ಯಕ್ತಿಯ ಮಾತನ್ನು ನಂಬುತ್ತೇನೆ. ಆರೋಪ ಮಾಡಿದ ಮಹಿಳೆಯ ವಾದವನ್ನು ಸರಿಯಾಗಿ ಪ್ರಶ್ನೆ ಮಾಡಿ. ಇದು ನಾಚಿಕೆಗೇಡಿನ ಅಮಾನವೀಯತೆಯ ಘಟನೆಯಾಗಿದೆ. ನಾನು ಡೆಲಿವರಿ ಬಾಯ್ ಪರ ಸಹಾಯಕ್ಕೆ ಸಿದ್ಧರಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜೊಮ್ಯಾಟೋ ಕಂಪನಿ ಹಿತೇಶಾ ಮತ್ತು ಕಾಮರಾಜ್ ರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ, ಎರಡು ಕಡೆಯ ವಾದಗಳನ್ನು ನಾವು ಕೇಳಿದ್ದೇವೆ, ಇಬ್ಬರಿಗೂ ನಾವು ಬೆಂಬಲ ನೀಡಿದ್ದೇವೆ, ತನಿಖೆಯ ನಂತರ ಸತ್ಯ ಹೊರಬರಬೇಕಿದೆ ಎಂದು ಕಂಪನಿ ತಿಳಿಸಿತ್ತು. ಘಟನೆ ಬಳಿಕ ಡೆಲಿವರಿ ಬಾಯ್ ಕಾಮರಾಜ್‍ನನ್ನು ಜೊಮ್ಯಾಟೋ ಕೆಲಸದಿಂದ ವಜಾಗೊಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಮುಂದಿನ ಸತ್ಯಾಸತ್ಯತೆ ತನಿಖೆ ಬಳಿಕವಷ್ಟೆ ಹೊರಬರಬೇಕಿದೆ.