ಭೋಪಾಲ್: ಕಾರಾಗೃಹದ ಗೋಡೆ ಕುಸಿದು 22 ಕೈದಿಗಳು ಗಂಭೀರ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
Madhya Pradesh | Barrack wall of Bhind jail collapsed; 22 inmates injured
This jail is around 150 years old. Barrack 6 was completely destroyed after its wall collapsed. 22 critically injured inmates rescued & sent to hospital. No casualty reported: Manoj Kumar Singh, SP Bhind pic.twitter.com/B6lHSR7taE
— ANI (@ANI) July 31, 2021
Advertisement
ಇಂದು ಬೆಳಗ್ಗೆ 5.10ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾರಾಗೃಹದ ನಂ.6ನೇ ಕೊಠಡಿಯ ಗೋಡೆ ಕುಸಿದುಬಿದ್ದಿದೆ. 22 ಕೈದಿಗಳು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬ ಕೈದಿಗೆ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗ್ವಾಲಿಯರ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಿಂಡ್ ಎಸ್‍ಪಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ರಿವೀಲ್ ಆಯ್ತು ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್ ಲುಕ್
Advertisement
Out of total 255 inmates housed in the jail, 64 were housed in the barrack which collapsed at around 5.15 am. 22 of them were injured after being trapped in the debris. None of the 255 inmates of the jail are missing. @NewIndianXpress @TheMornStandard @khogensingh1 @gsvasu_TNIE pic.twitter.com/b8iH0YGubG
— Anuraag Singh (@anuraag_niebpl) July 31, 2021
Advertisement
ದುರ್ಘಟನೆ ನಡೆಯುವ ಸಂದರ್ಭದಲ್ಲಿ ಕಾರಾಗೃಹದಲ್ಲಿ 225 ಕೈದಿಗಳು ಇದ್ದರು. ಗೋಡೆ ಕುಸಿತದ ಸುದ್ದಿ ಕೇಳುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದರು. ಕಾರಾಗೃಹದ ಕಟ್ಟಡ ಅತ್ಯಂತ ಹಳೆಯದಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗೋಡೆಗಳೆಲ್ಲ ಒದ್ದೆಯಾಗಿದ್ದವು. ಇದೇ ಕಾರಣಕ್ಕೆ ಕುಸಿದುಬಿದ್ದಿವೆ ಎಂದೂ ಹೇಳಿದ್ದಾರೆ.
Advertisement