ಲಕ್ನೋ: ಆರು ವರ್ಷಗಳ ಕಾಲ ಜೈಲಲ್ಲಿದ್ದವ ಈಗ ಗ್ರಾಮದ ಮುಖ್ಯಸ್ಥನಾಗಿದ್ದಾನೆ. ಜೈಲಿನಿಂದಲೇ ನಾಮಪತ್ರಸಲ್ಲಿಸಿದ್ದವ ಭಾರೀ ಅಂತರದೊಂದಿಗೆ ಗೆದ್ದಿದ್ದಾನೆ.
Advertisement
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಛುನಾವ್ ಗ್ರಾಮದಲ್ಲಿನ ರಾಮದಾಸ್ ಕಳೆದ 6 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಕಳ್ಳತನ, ಮೋಸ, ವಂಚೆನ, ಕೊಲೆ ಸೇರಿ ಒಟ್ಟು 12 ಪ್ರಕರಣಗಳು ಆತನ ವಿದುದ್ಧವಿದೆ. ಹಾಗಿದ್ದರು ಗ್ರಾಮಸ್ಥರು ಆತನನ್ನೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ.
Advertisement
Advertisement
ರಾಮದಾಸ್ ಪಂಚಾಯಿತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದನಂತೆ. ರಾಮದಾಸ್‍ಗೆ 786 ಮತಗಳು ಬಂದಿವೆ. ಇವನ ಪ್ರತಿಸ್ಪರ್ಧಿಗೆ 300 ಮತಗಳು ಬಂದಿದೆ. ಗ್ರಾಮಸ್ಥರು ಇಟ್ಟಿರುವ ನಂಬಿಕೆ ಬಗ್ಗೆ ಸಂತೋಷವಾಗಿದೆ. ಇನ್ನೆಂದೂ ತಪ್ಪು ಕೆಲಸ ಮಾಡುವುದಿಲ್ಲ. ಗ್ರಾಮಕ್ಕಾಗಿ ದುಡಿಯುತ್ತೇನೆ ಎಂದು ರಾಮದಾಸ್ ಭರವಸೆ ನೀಡಿದ್ದಾನೆ.