ಜೈಲಿನಲ್ಲಿದ್ದ 28 ದಿನದ ರಿಯಾ ದಿನಚರಿ ಬಿಚ್ಚಿಟ್ಟ ವಕೀಲ

Public TV
2 Min Read
Rhea

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಬೈಖಲಾ ಜೈಲಿನಲ್ಲಿ 28 ದಿನ ಕಳೆದಿರುವ ರಿಯಾ ನಿನ್ನೆ ಮನೆ ಸೇರಿದ್ದಾರೆ. ಐಷಾರಾಮಿ ಜೀವನ ನಡೆಸಿದ್ದ ಯುವ ನಟಿ ಜೈಲಿನಲ್ಲಿ ಹೇಗಿದ್ದರು ಅನ್ನೋದನ್ನು ರಿಯಾ ಪರ ವಕೀಲ ಸತೀಶ್ ಮನಶಿಂಧೆ ರಿವೀಲ್ ಮಾಡಿದ್ದಾರೆ. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಿಯಾ ಚಕ್ರವರ್ತಿ ಜೈಲಿನ ದಿನಚರಿಯನ್ನು ತಿಳಿಸಿದ್ದಾರೆ.

Rhea 1

ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವೈಯಕ್ತಿಕವಾಗಿ ಬಂಧನದಲ್ಲಿರುವ ವ್ಯಕ್ತಿಯನ್ನ ನೋಡಲು ಜೈಲಿಗೆ ಹೋಗಿದ್ದೆ. ಬಂಧನದಲ್ಲಿರುವ ರಿಯಾ ಹಿಂದೆ ಮೂರು ತನಿಖಾ ಏಜೆನ್ಸಿಗಳು ವಿಚಾರಣೆ ಹೆಸರಲ್ಲಿ ಮಾನಸಿಕವಾಗಿ ಆಕೆಯನ್ನ ಕುಗ್ಗುವಂತೆ ಮಾಡಿದ್ದವು. ಹಾಗಾಗಿ ಕಕ್ಷಿದಾರ ಅನ್ನೋದಕ್ಕಿಂತೆ ಮಹಿಳೆಯಾಗಿ ರಿಯಾ ಜೈಲಿನಲ್ಲಿ ಹೇಗಿದ್ದಾರೆ ಎಂದು ತಿಳಿದುಕೊಳ್ಳು ಹೋಗಿದ್ದೆ. ಅಲ್ಲಿ ಸಮತೋಲನ ಸ್ಥಿತಿಯಲ್ಲಿರುವ ರಿಯಾರನ್ನ ನೋಡಿ ಸಮಾಧಾನ ಆಯ್ತು ಎಂದು ಹೇಳಿದರು. ಇದನ್ನೂ ಓದಿ: 5 ವರ್ಷದಲ್ಲಿ ಸುಶಾಂತ್ ಗಳಿಸಿದ್ದು 70 ಕೋಟಿ-ರಿಯಾಗಾಗಿ ಖರ್ಚು ಮಾಡಿದೆಷ್ಟು?

Rhea 2

ಜೈಲಿನಲ್ಲಿ ಯೋಗ ಕ್ಲಾಸ್: ಜೈಲು ಸೇರಿದ ದಿನದಿಂದಲೇ ರಿಯಾ ಮೊದಲು ತಮ್ಮನ್ನು ತಾವು ಕಾಪಾಡಿಕೊಂಡಿದ್ದಾರೆ. ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಮಾನಸಿಕವಾಗಿ ಸದೃಢರಾಗಿದ್ದಾರೆ. ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗ ಸಹ ಮಾಡುತ್ತಿದ್ದರು. ಜೈಲಿನಲ್ಲಿದ್ದ ಇನ್ನಿತರ ಕೈದಿಗಳಿಗೂ ರಿಯಾ ಯೋಗದ ಪಾಠ ಮಾಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

Sushanth

ಕೊರೊನಾ ಹಿನ್ನೆಲೆ ರಿಯಾ ಅವರಿಗೆ ಮನೆ ಊಟ ನೀಡುವಂತಿರಲಿಲ್ಲ. ಹೀಗಾಗಿ ಜೈಲಿನಲ್ಲಿ ನೀಡಲಾಗುವ ಊಟವನ್ನ ಸೇವಿಸಿ ಅಲ್ಲಿಯ ವ್ಯವಸ್ಥೆಗೆ ಹೊಂದಿಕೊಂಡು ಸಾಮಾನ್ಯ ಮಹಿಳೆಯಂತೆ ಕಾಲ ಕಳೆದಿದ್ದಾರೆ. ಮುಂದೆ ಇರೋ ಯುದ್ಧವನ್ನು ಗೆಲ್ಲಲು ಓರ್ವ ಸೈನಿಕ ಮಗಳಾಗಿ ರಿಯಾ ತಮ್ಮನ್ನು ತಾವು ಸಕಾರಾತ್ಮಕವಾಗಿ ಇಟ್ಟುಕೊಂಡಿದ್ದರು. ಇದನ್ನೂ ಓದಿ: ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ

Rhea

ಮುಂದಿನ ದಿನಗಳಲ್ಲಿ ರಿಯಾ ಮೂರ್ಖರೊಂದಿಗೆ ಹೋರಾಡಬೇಕಿದೆ. ನಾಚಿಕೆ ಇಲ್ಲದ ಕೆಲವರು ಆಕೆಯ ಸಂದರ್ಶನಕ್ಕಾಗಿ ನನ್ನ ಕಚೇರಿಯ ಹೊರಗೆ ನಿಂತಿದ್ದಾರೆ. ಕೆಲವರು ಸುಶಾಂತ್ ನಿಗೂಢ ಸಾವಿನ ಸತ್ಯ ತಿಳಿಯಲು ವರದಿ ಮಾಡಿದ್ದರು. ಕೆಲವರು ಟಿಆರ್‍ಪಿಗಾಗಿ ಕಕ್ಷಿದಾರರ ಚಾರಿತ್ರ್ಯಹರಣ ಮಾಡಿದರು. ಸುಶಾಂತ್ ಕುಟುಂಬಸ್ಥರು ರಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಆದ್ರೆ ಆಕೆ ಹಾಗೆ ಮಾಡುತ್ತಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಮೃತ ನಟನನ್ನ ಪ್ರೀತಿಸುತ್ತಿದ್ದ ಕಾರಣ ಮತ್ತು ಆತನ ಜೊತೆ ವಾಸವಾಗಿದ್ದಕ್ಕೆ ಮೂರು ತನಿಖಾ ಏಜೆನ್ಸಿಗಳು ರಿಯಾ ಹಿಂದೆ ಬಿದ್ದಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಕ್ಕ ರಿಯಾಗೆ ಜಾಮೀನು ಸಿಕ್ಕರೂ ಶೌವಿಕ್ ಬೇಲ್ ರಿಜೆಕ್ಟ್

Share This Article
Leave a Comment

Leave a Reply

Your email address will not be published. Required fields are marked *