ಬೆಂಗಳೂರು: ಜೆಲ್ಲಿ ರೂಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್ ಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರಿನ ಜಾನ್ ನಿಖೋಲಸ್ (21) ಹಾಗೂ ಜೆಪಿ ನಗರದ ಇರ್ಫಾನ್ ಶೇಖ್ (29) ಬಂಧಿತ ಆರೋಪಿಗಳಿದ್ದಾರೆ. ಬಂಧಿತರಿಂದ ನಾಲ್ಕು ಲಕ್ಷ ಮೌಲ್ಯದ ಟಿಎಚ್‍ಸಿ ಡ್ರಗ್ಸ್ (50 ಜೆಲ್ಲಿಗಳು), ಎರಡು ಮೊಬೈಲ್, 27 ಎಲ್‍ಎಸ್‍ಡಿ ಸ್ಟ್ರಿಪ್ಸ್, ಎಕ್ಸ್ಟೈಸಿ ಪಿಲ್ಸ್, ಮೊಬೈಲ್, ಟಿಎಚ್‍ಸಿ ಮಾತ್ರೆ ಸೇರಿದಂತೆ ಕಾರು ಜಪ್ತಿ ಮಾಡಿದ್ದಾರೆ.
Well…these jellies can attract any child..they are Marijuana laced jellies..seized by CCB along with Ecstacy and LSD drugs..2 drug peddlers arrested..further investigation on.. pic.twitter.com/SOpto53O3K
— Sandeep Patil IPS (@ips_patil) September 18, 2020
ಮಕ್ಕಳಿಗಾಗಿ ಜೆಲ್ಲಿ ಎಂಬ ಹೆಸರಿನಲ್ಲಿ ಟಿಎಚ್‍ಸಿ ಎಂಬ ಜೆಲ್ಲಿ ರೂಪದ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು. ನಗರದ ಎಂಜಿ ರಸ್ತೆಯ ಆರ್ ಎಸ್‍ಐ ಕಾಂಪೌಂಡ್ ಬಳಿ ಮಾರಾಟಕ್ಕೆ ಮುಂದಾಗಿದ್ದರು, ಈ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಅಶ್ವಿನ್ ಎಂಬುವನಿಂದ ಡ್ರಗ್ಸ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಸದ್ಯ ಅಶ್ವಿನ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್