ಬೆಂಗಳೂರು: ಕೊರೊನಾದಿಂದ ಅರ್ಧಕ್ಕೆ ನಿಂತಿರುವ ಬಿಗ್‍ಬಾಸ್ ರಿಯಾಲಿಟಿ ಶೋ ಜೂನ್ 21 ರಿಂದ ಮತ್ತೆ ಪ್ರಾರಂಭವಾಗಲಿದೆ.
Advertisement
ಬಿಗ್‍ಬಾಸ್ 8ನೇ ಆವೃತ್ತಿ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಮೊಟಕುಗೊಳಿಸಲಾಗಿತ್ತು. ಇದೀಗ ಮತ್ತೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಸ್ಪರ್ಧಿಗಳು ಕ್ವಾರಂಟೈನ್ ಮಾಡಿ ಕೊರೊನಾ ಪರೀಕ್ಷೆ ಮಾಡಿದ ನಂತರ ಬಿಗ್‍ಬಾಸ್ ಮನೆಗೆ ಮತ್ತೆ ಸ್ಫರ್ಧಿಗಳು ಗ್ರ್ಯಾಂಡ್ ಎಂಟ್ರಿಕೊಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಸುದ್ದಿ ಪ್ರಕಟಗೊಂಡಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಮುಲಾಮು – ಕನ್ನಡಿಗನಿಂದ ಸಂಶೋಧನೆ
Advertisement
Advertisement
ಕೊರೊನಾ ನಿಯಮಗಳ ಕಾರಣಕ್ಕೆ ಬಿಗ್‍ಬಾಸ್ 8 ನೇ ಆವೃತ್ತಿ 72 ದಿನಗಳಿಗೆ ಅರ್ಧದಲ್ಲೇ ನಿಂತು ಹೋಗಿತ್ತು. 12 ಮಂದಿ ಸ್ಪರ್ಧಿಗಳನ್ನು ಬಿಗ್‍ಬಾಸ್ ಮನೆಯಿಂದ ಆಚೆ ಕರೆತರಲಾಗಿತ್ತು. ಆದರೆ ವಿನ್ನರ್ ಯಾರು ಎಂದು ಬಿಗ್‍ಬಾಸ್ ಹೇಳಿರಲಿಲ್ಲ. ಈಗ ಪೂರ್ತಿ ನೂರು ದಿನಗಳನ್ನು ಪೂರೈಸುವ ಯೋಜನೆ ವಾಹಿನಿಯದ್ದಾಗಿದೆ. ಹೀಗಾಗಿ ಈಗ ಮತ್ತೆ 28 ದಿನಗಳ ಕಾಲ ಮತ್ತೆ ಶೋ ಪ್ರಸಾರ ನಡೆಸಲು ಸಿದ್ಧತೆ ನಡೆಯುತ್ತಿದೆ.
Advertisement
12 ಮಂದಿ ಸ್ಪರ್ಧಿಗಳ ಜೊತೆಗೆ ಇಬ್ಬರು ಹೊಸ ಸ್ಪರ್ಧಿಗಳನ್ನೂ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಈ ಹೊಸ ಸ್ಫರ್ಧಿಗಳು ಯಾರು ಎಂಬುದು ಗೊತ್ತಾಗಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಸ್ತುತ ನಾನ್ ಫಿಕ್ಷನ್ ಕಾರ್ಯಕ್ರಮಗಳು ಯಾವುದೂ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿಲ್ಲ. ಹೀಗಾಗಿ ಅರ್ಧದಲ್ಲೇ ನಿಂತಿದ್ದ ಬಿಗ್‍ಬಾಸ್ ಶೋ ಮತ್ತೆ ಪ್ರಸಾರ ಮಾಡಲು ವಾಹಿನಿ ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳುತ್ತಿದೆ. ವಾರಾಂತ್ಯದ ಕಾರ್ಯಕ್ರಮದಲ್ಲೂ ಎಂದಿನಂತೆ ಸುದೀಪ್ ಕೂಡಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತಾ ಎಂದು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತದೆ ಎನ್ನುವ ಸುದ್ದಿ ಸಖತ್ ಖುಷಿಯನ್ನು ತಂದಿದೆ. ಬಿಗ್‍ಬಾಸ್‍ನಲ್ಲಿ ಏನೆಲ್ಲಾ ಬದಲಾವಣೆಗಳು ಇರಲಿವೆ, ಯಾರೆ ಲ್ಲಾ ಮನೆಯಲ್ಲಿ ಹೊಸ ಆಟವನ್ನೂ ಶುರು ಮಾಡಲಿದ್ದಾರೆ. ಏನೆಲ್ಲಾ ಹೊಸ ಮಸಾಲೆಯನ್ನು ಬಿಗ್‍ಬಾಸ್ ತೆರೆಮೆಲೆ ತರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.