ಬೆಂಗಳೂರು: ದೇಶದಲ್ಲಿ ಲಾಕ್‍ಡೌನ್ 5 ನಾಳೆಯಿಂದ ಆರಂಭವಾಗಲಿದ್ದು ಕೇಂದ್ರ ಸರ್ಕಾರ ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ ಅನ್ವಯ ಜೂನ್ 8 ರಿಂದ ಹೊಟೇಲ್, ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆ.
ಈಗಾಗಲೇ ಪಾರ್ಸೆಲ್ ವಿತರಣೆಗೆ ಅವಕಾಶ ನೀಡಲಾಗಿದ್ದು ಇನ್ನು ಮುಂದೆ ಕುಳಿತು ತಿನ್ನುವುದಕ್ಕೂ ಅವಕಾಶ ನೀಡಲಾಗುತ್ತದೆ. ರೆಸಾರ್ಟ್ ಸೇರಿ ಇನ್ನಿತರೆ ಆತಿಥ್ಯ ಸೇವೆಗಳು ತೆರೆಯಬಹುದು. ಈ ವಾರ ಹೋಟೆಲ್ ಗಳು ಯಾವೆಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾರ್ಗಸೂಚಿ ಪ್ರಕಟವಾಗಲಿದೆ.
Advertisement
Advertisement
ಷರತ್ತುಗಳು ಏನಿರಬಹುದು?
* ಟೇಬಲ್ ಸಿಟ್ಟಿಂಗ್‍ಗೆ ಅವಕಾಶ ನೀಡುವ ಸಾಧ್ಯತೆ
* ಒಂದು ಟೇಬಲ್ ಗೆ ಒಬ್ಬ ಗ್ರಾಹಕನಿಗೆ ಮಾತ್ರ ಅವಕಾಶ
*ಹೋಟೆಲಿಗೆ ಎಂಟ್ರಿಯಾದ ಕೂಡಲೇ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ದೂರವಾಣಿ ನಂಬರ್ ನಮೂದಿಸಬೇಕು
* ಮಾಸ್ಕ್ ಧರಿಸಬೇಕು, ಹ್ಯಾಂಡ್ ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
Advertisement
Advertisement
* ಗ್ರಾಹಕ ಕೂರುವ ಪ್ರತಿಯೊಂದು ಟೇಬಲ್‍ನಲ್ಲಿಯೂ ಹ್ಯಾಂಡ್ ಸ್ಯಾನಿಟೈಸರ್ ಇರಬೇಕು
* ಗ್ರಾಹಕ ಉಪಹಾರ ಸೇವಿಸಿ ಹೋದ ಬಳಿಕ ಆ ಜಾಗವನ್ನ ಇನ್ನೊಮ್ಮೆ ಸ್ಯಾನಿಟೈಸ್ ಮಾಡಬೇಕು
* ಗ್ರಾಹಕರಿಗೆ ಸರ್ವ್ ಮಾಡುವಾಗ ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಹಾಕಿರಬೇಕು
* ಡಿಜಿಟಲ್ ಪೇಮೆಂಟ್‍ಗೆ ಆದ್ಯತೆ
* ಹೊಟೇಲ್‍ಗಳಲ್ಲಿ ಸಿಬ್ಬಂದಿ ಸಂಖ್ಯೆಯೂ ನಿಗದಿತ ಪ್ರಮಾಣದಲ್ಲಿರಬೇಕು
* 60 ವರ್ಷ ಮೇಲ್ಪಟ್ಟವರಿಗೆ ಹೊಟೇಲ್‍ಗಳಲ್ಲಿ ಅವಕಾಶವಿಲ್ಲ