ಬೆಂಗಳೂರು: ಈಗಾಗಲೇ ಎರಡು ತಿಂಗಳಿಂದ ಲಾಕ್ ಡೌನ್ ಆಗಿದೆ. ಜೂನ್ 7 ರ ನಂತರ ಲಾಕ್‍ಡೌನ್ ಬೇಡ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ವಿಸ್ತರಣೆ ಮಾಡುವುದು ಬೇಡ. ಎರಡು ತಿಂಗಳಿಂದ ಲಾಕ್ ಡೌನ್ ಆಗಿರುದುದರಿಂದ ದಿನ ಕೂಲಿ ಮಾಡಿ ಜೀವನ ಮಾಡುವವರ ಜೀವನ ಈಗಲೇ ಕಷ್ಟವಾಗಿದೆ ಹೀಗಾಗಿ ಜೂನ್ 7 ರ ನಂತರ ಲಾಕ್‍ಡೌನ್ ಮುಂದುವರೆಸುವುದು ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆ ಮಾಡುವಂತೆ ಸಿಎಂ ಸೂಚನೆ
ಮತ್ತೆ ಲಾಕ್ ಡೌನ್ ಮುಂದುವರೆಸಿದರೆ ಕಷ್ಟವಾಗುತ್ತೆ. ಸಿಎಂ ಅಭಿಪ್ರಾಯ ಕೇಳಿದರೆ ಇದೆ ಅಭಿಪ್ರಾಯವನ್ನು ತಿಳಿಸುತ್ತೇನೆ. ಈಗಾಗಲೇ ಕೊರೊನಾ ಪ್ರಕರಣ ಇಳಿಮುಖವಾಗುತ್ತಿದೆ. ಇದರಿಂದ ಲಾಕ್‍ಡೌನ್ ಮುಂದುವರೆಸುವುದು ಬೇಡ ಎಂದಿದ್ದಾರೆ.
ಜೂನ್ 7ರ ತನಕ ಲಾಕ್ ಡೌನ್ ಮುಂದುವರಿಯಲಿದೆ. ಕೊರೊನಾ ಸ್ಥಿತಿಗತಿ ತಿಳಿದುಕೊಂಡು ಲಾಕ್‍ಡೌನ್ ವಿಸ್ತರಣೆ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಜನರು ಸಹಕರಿಸಿದರೆ ಲಾಕ್‍ಡೌನ್ ಮುಂದುವರಿಸುವ ಸಂದರ್ಭ ಉದ್ಭವ ಆಗಲ್ಲ. ಇಲ್ಲದಿದ್ದರೆ ಪರಿಸ್ಥಿತಿ ನೋಡಿ ತೀರ್ಮಾನ ಮಾಡಬೇಕಾಗುತ್ತೆದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಇದನ್ನೂ ಓದಿ: ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ: ಬಿಎಸ್‍ವೈ
ಲಾಕ್‍ಡೌನ್ ಮುಂದುವರಿಸುವುದರ ಕುರಿತಾಗಿ ಒಬ್ಬೊಬ್ಬ ಸಚಿವರದ್ದು ಒಂದೊಂದು ಅಭಿಪ್ರಾಯ ಕೇಳಿ ಬರುತ್ತಿದೆ. ಸದ್ಯ ಪಾಸಿಟಿವಿಟಿ ರೇಟ್ 16% ತಲುಪಿದೆ. ನಾಲ್ಕೈದು ದಿನಗಳಲ್ಲಿ 8ಕ್ಕೆ ಇಳಿದರೂ ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಬಹುದು. ನಂತರ ಪಾಸಿಟಿವಿಟಿ ರೇಟ್ 6%ಕ್ಕಿಂತ ಕೆಳಗೆ ಇಳಿದ್ರೆ ಲಾಕ್‍ಡೌನ್ ವಿನಾಯ್ತಿ ಕೊಡುವ ಸಾಧ್ಯತೆ.