ಬೆಂಗಳೂರು: ಜೂನ್ ಏಳರಿಂದ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕೆಂದುಯ ಬಿಎಂಟಿಸಿಯ ಉತ್ತರ ವಲಯ ಘಟಕದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಎಲ್ಲ ಸಿಬ್ಬಂದಿ ಕೊರೊನಾ ಲಸಿಕೆ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಿದೆ.
ಲಾಕ್‍ಡೌನ್ ಹಿನ್ನೆಲೆ ಬಿಎಂಟಿಸಿ ಸಂಚಾರ ಸ್ತಬ್ಧವಾಗಿದ್ದು, ತುರ್ತು ಸೇವೆಗೆ ಬೆರಳಣಿಗೆ ಬಸ್ ಗಳು ಮಾತ್ರ ರಸ್ತೆಗೆ ಇಳಿದಿವೆ. ಜೂನ್ 7ರ ನಂತರ ಲಾಕ್‍ಡೌನ್ ಅಂತ್ಯವಾಗುತ್ತಾ ಅಥವಾ ವಿಸ್ತರಣೆ ಆಗುತ್ತಾ ಅನ್ನೋದರ ಕುರಿತು ಚರ್ಚೆಗಳು ನಡೆದಿವೆ. ಕೆಲ ಸಚಿವರು ವಿಸ್ತರಣೆ ಅಂತ ಹೇಳ್ತಿದ್ರೆ, ಇನ್ನೂ ಕೆಲವರು ಅನ್‍ಲಾಕ್ ಮಂತ್ರ ಜಪಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಜೂನ್ 6ರಂದು ಲಾಕ್‍ಡೌನ್ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
Advertisement
Advertisement
ಹಂತ ಹಂತವಾಗಿ ಬಸ್ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದ್ದು, ಎಲ್ಲ ವಿಭಾಗಗಳ ಸಿಬ್ಬಂದಿಗೆ ಕರ್ತವ್ಯಕ್ಕೆ ಹಿಂದಿರುಗಬೇಕು. ಗೈರಾಗುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾವಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಎಂಟಿಸಿ ಈ ಪ್ರಕಟಣೆ ಜೂನ್ 7ರ ನಂತ್ರ ಲಾಕ್‍ಡೌನ್ ಅಂತ್ಯವಾಗುತ್ತಾ ಪ್ರಶ್ನೆಯನ್ನ ಹುಟ್ಟುಹಾಕಿದೆ.