ಹಾವೇರಿ: ಸರ್ಕಾರದ ಆದೇಶದ ಹಿನ್ನೆಲೆ ರಾಜ್ಯದಲ್ಲಿ ಇಂದು ಬಹುತೇಕ ದೇವಾಲಯಗಳು ತೆರೆದಿದ್ದು, ಭಕ್ತರು ದೇವರ ದರ್ಶನದಲ್ಲಿ ತೊಡಗಿದ್ದಾರೆ. ಆದರೆ ದೇವರಗುಡ್ಡದ ಮಾಲತೇಶ ದೇವಾಲಯವನ್ನು ಜೂನ್ 30ರ ವರೆಗೆ ತೆರೆಯದಿರಲು ನಿರ್ಧರಿಸಲಾಗಿದೆ.
ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನವನ್ನು ಜೂನ್ 30ರವರೆಗೆ ತೆರೆಯದಿರಲು ತೀರ್ಮಾನಿಸಮಾಗಿದ್ದು, ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಸಭೆ ಸೇರಿ ಈ ನಿರ್ಧಾರ ಮಾಡಿದ್ದಾರೆ. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆ ಜೂನ್ 30ರವರೆಗೆ ದೇವಸ್ಥಾನ ತೆರೆಯದಿರಲು ನಿರ್ಧಾರ ಮಾಡಲಾಗಿದೆ.
Advertisement
Advertisement
ಜೂನ್ 30ರ ನಂತರ ದೇವಸ್ಥಾನ ತೆರೆಯಲಾಗುವುದು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸುವ ಹಿನ್ನೆಲೆ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ನಿರ್ಧಾರ ಮಾಡಿದ್ದೇವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಹೇಳಿದ್ದಾರೆ.