ಬೆಂಗಳೂರು: ನಾಯಕತ್ವ ಬದಲಾವಣೆ ಸಂಬಂಧ ರಾಜ್ಯ ಬಿಜೆಪಿ ನಡೆಯುತ್ತಿರುವ ಒಳ ಜಗಳವನ್ನು ಶಮನ ಮಾಡಲು ಮೂರು ದಿನಗಳ ಕಾಲ ಅರುಣ್ ಸಿಂಗ್ ಸಿಟ್ಟಿಂಗ್ ನಡೆಯಲಿದೆ.
ಜೂನ್ 16ರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುವ ಅರುಣ್ ಸಿಂಗ್, ಜೂನ್ 18ರ ರಾತ್ರಿ ವಾಪಸ್ ದೆಹಲಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹ ಮಾಡಲಿದ್ದು ಬಳಿಕ ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ರಾಜ್ಯ ಪ್ರವಾಸದ ವೇಳೆ ಎಲ್ಲ ಬಣದವರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಲು ಅರುಣ್ ಸಿಂಗ್ ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಸಕಾಂಗ ಪಕ್ಷದ ಸಭೆ ಕರೆಯವ ಬಗ್ಗೆ ಜೂನ್ 17 ರಂದು ನಿರ್ಧರಿಸುವ ಸಾಧ್ಯತೆ ಇದೆ. ಪಕ್ಷದ ವಿದ್ಯಮಾನಗಳನ್ನು ನೋಡಿಕೊಂಡು ಶಾಸಕಾಂಗ ಪಕ್ಷದ ಸಭೆ ಕರೆಯಬೇಕೋ? ಬೇಡ್ವೋ? ಎಂಬುದರ ಬಗ್ಗೆ ನಿರ್ಧಾರ ಮಾಡ್ತಾರೆ ಎನ್ನಲಾಗಿದೆ. ಇದನ್ನೂ ಓದಿ: ಏರ್‌ಪೋರ್ಟಿನಲ್ಲಿ ಅಡ್ಡ ಹಾಕಿ ಅರುಣ್ ಸಿಂಗ್ ಎದುರು ಕಣ್ಣೀರು ಹಾಕಿದ್ರು ರೇಣುಕಾಚಾರ್ಯ
ಅರುಣ್ ಸಿಂಗ್ ರಾಜ್ಯ ಪ್ರವಾಸದ ಆ ಮೂರು ದಿನದಲ್ಲಿ ಯಾರು ಬಚಾವ್? ಯಾರು ಸೇಫ್? ಯಾರು ಇಕ್ಕಟ್ಟಿಗೆ ಸಿಲುಕುತ್ತಾರೆ? ಎಂಬ ಕುತೂಹಲ ಮನೆ ಮಾಡಿದೆ. ಯಡಿಯೂರಪ್ಪ ಪರ ಬಣಕ್ಕೆ ಜಯವೋ? ವಿರೋಧಿ ಬಣಕ್ಕೆ ಜಯವೋ? ನಿಷ್ಠ ಬಣಕ್ಕೆ ಮುನ್ನಣೆಯೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.