– ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಮಿನಿ ಲಾಕ್
-BMTC, KSRTC ಬಸ್ ಸಂಚಾರ ಇಲ್ಲ
ಬೆಂಗಳೂರು: ರಾಜ್ಯದಲ್ಲಿ ಸೋಂಕು ಇಳಿಕೆ ಕಂಡುಬಂದಿರುವ ಕಾರಣ ಜೂನ್ 14ರಿಂದ ಅನ್‍ಲಾಕ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದರು.
ಶೇಕಡಾ 5ಕ್ಕಿಂತ ಹೆಚ್ಚು ಸೋಂಕಿರುವ 11 ಜಿಲ್ಲೆಗಳಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಸೋಂಕು ಹೆಚ್ಚಿರೋ ಕಾರಣದಿಂದಾಗಿ, ಅನ್‍ಲಾಕ್ ಪ್ರಕ್ರಿಯೆಯಿಂದ ಈ ಜಿಲ್ಲೆಗಳನ್ನು ಹೊರಗಿಡಲಾಗಿದೆ. ಅನ್‍ಲಾಕ್ ಪ್ರಕ್ರಿಯೆ ಆರಂಭವಾದ್ರೂ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ.
Advertisement
Advertisement
ಏನಿರುತ್ತೆ? ಏನಿರಲ್ಲ?
* ಎಲ್ಲ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಖಾನೆಗಳು ಕಾರ್ಯ ನಡೆಸಬಹುದು. ಗಾರ್ಮೆಂಟ್ಸ್ ಗಳಿಗೆ ಶೇ.30ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
* ಮಧ್ಯಾಹ್ನ 2 ಗಂಟೆವರೆಗೆ ದಿನಸಿ ಅಂಗಡಿಗಳು ತೆರೆಯಬಹುದು
* ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಬೀದಿ ಬದಿ ವ್ಯಾಪಾರ
* ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ
* ವೀಕೆಂಡ್ ಲಾಕ್‍ಡೌನ್, ಶುಕ್ರವಾರ ರಾತ್ರಿ 7ರಿಂದ ಬೆಳಗ್ಗೆ 5 ಗಂಟೆವರೆಗೂ ಇರಲಿದೆ.
* ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರ ಇಲ್ಲ.
* ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು.
Advertisement
Advertisement
ಬೆಳಗ್ಗೆ 8 ಜಿಲ್ಲೆಗಳ ಡಿಸಿಗಳು ಮತ್ತು ಉಸ್ತುವಾರಿ ಸಚಿವರ ಜೊತೆ ವರ್ಚೂವಲ್ ಸಭೆ ನಡೆಸಿದ್ದ ಸಿಎಂ ಸಂಜೆ ಸಚಿವರು ಮತ್ತು ಉನ್ನತಾಧಿಕಾರಿಗಳ ಜೊತೆ ಲಾಕ್, ಅನ್‍ಲಾಕ್ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಜನ ಮೈಮರೆಯಬಾರದು. ಎಚ್ಚರಿಕೆಯಿಂದ ಇರಬೇಕು ಎಂಬ ಮಾತನ್ನು ಸಿಎಂ ಒತ್ತಿ ಹೇಳಿದರು.