ಜೂನ್ 10ರಿಂದ ಪ್ರವಾಸೋದ್ಯಮಕ್ಕೆ ಚಾಲನೆ

Public TV
1 Min Read
TORISUM

– ಪ್ರಾರಂಭಿಕವಾಗಿ 4 ಪ್ರವಾಸಿ ತಾಣಗಳಿಗೆ ಅವಕಾಶ

ಬೆಂಗಳೂರು: ಜೂನ್ 8 ರಿಂದ 5ನೇ ಹಂತದ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸ ಸೇವೆ ಪ್ರಾರಂಭ ಮಾಡಲು ಸಿದ್ಧತೆ ನಡೆಯುತ್ತಿದೆ.

ಕೊರೊನಾ ಲಾಕ್‍ಡೌನ್ ಸಡಿಲವಾಗಿದ್ದು, ಜೂನ್ 8 ರಿಂದ ದೇವಸ್ಥಾನ, ಚರ್ಚ್, ಮಸೀದಿ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇದೀಗ ಇದರ ಬೆನ್ನಲ್ಲೇ ಜೂನ್ 10 ರಿಂದ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಾಗಿದೆ. ಪ್ರಾರಂಭಿಕವಾಗಿ ನಾಲ್ಕು ಪ್ರವಾಸಿ ತಾಣಗಳಿಗೆ ಮಾತ್ರ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.

5008598671 6aa240106f b

1. ಸೌತ್ ಕೆನರಾ ಟೆಂಪಲ್ ಟೂರ್
2. ಬೆಂಗಳೂರು ಮತ್ತು ಮೈಸೂರು ನಗರ ಪ್ರದಕ್ಷಿಣೆ
3. ನೇಚರ್ ಸ್ಲೈಂಡರ್ ಬೆಂಗಳೂರು-ಮಡಿಕೇರಿ-ನಾಗರಹೊಳೆ- ಬೆಂಗಳೂರು
4. ಬೆಂಗಳೂರು-ಬೇಲೂರು-ಹಳೆಬೀಡು-ಶ್ರವಣ ಬೆಳಗೊಳ- ಬೆಂಗಳೂರು

ಈ ನಾಲ್ಕು ಪ್ರವಾಸಿ ತಾಣಗಳಿಗೆ ಮಾತ್ರ ಮೊದಲಿಗೆ ಆದ್ಯತೆ ನೀಡಲಾಗಿದೆ. ನಂತರ ಮುಂದಿನ ಪ್ರವಾಸಿ ತಾಣಗಳಿಗೆ ಅನುಮತಿ ನೀಡಲಾಗುವುದು. ಈಗಾಗಲೇ ಸರ್ಕಾರ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿ ಪುನರಾರಂಭಿಸಲು ಅವಕಾಶ ನೀಡಿದ್ದು, ಸಲಕ ಸಿದ್ಧತೆ ನಡೆಯುತ್ತಿದೆ.

abbey falls madikeri

ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪ್ರವಾಸ ಸೇವೆ ಒದಗಿಸಲು ಪ್ರವಾಸೋದ್ಯಮ ನಿಗಮ ನಿರ್ಧಾರ ಮಾಡಿದೆ. ಪ್ರವಾಸಕ್ಕೆ ತೆರಳುವವರು ಆನ್‍ಲೈನ್ ಮೂಲಕ, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಗಮದ ಪೊರ್ಟಲ್‍ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಬಸ್ಸಿನಲ್ಲಿ 50% ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನೂ ಪ್ರವಾಸಿ ಬಸ್‍ಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗುತ್ತೆ.

ಗೈಡ್, ಡ್ರೈವರ್, ಕ್ಲೀನರ್ ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಬೇಕು. ಜೊತೆಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮಾಡಿಸುವುದು ಕಡ್ಡಾಯವಾಗಿದೆ. ಪ್ರವಾಸ ಮಾಡುವ ಎಲ್ಲರಿಗೂ ಥರ್ಮಲ್ ಸ್ಕ್ಯಾನ್ ಕಡ್ಡಾಯವಾಗಿದೆ. ಆರೋಗ್ಯ ಸರಿ ಇಲ್ಲದವರು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಪ್ರವಾಸವನ್ನು ನಿಷೇಧ ಮಾಡಲಾಗಿದೆ. ಇನ್ನೂ ಪ್ರವಾಸಿಗರು ಕೂಡ ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಪ್ರವಾಸೋದ್ಯಮ ನಿಗಮದಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *