ನವದೆಹಲಿ: ಜನ ಕೊರೊನಾ ಲಸಿಕೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಕೊರತೆ ಮಾತ್ರ ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಸಿಗುವಂತೆ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದ್ದು, ಜೂನ್ನಲ್ಲಿ ಬರೋಬ್ಬರಿ 12 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Advertisement
ಲಸಿಕೆಗಳ ಬೃಹತ್ ಉತ್ಪಾದನೆ ಹಲವು ರಾಜ್ಯಗಳಿಗೆ ವರದಾನವಾಗಲಿದ್ದು, ಇದೀಗ ಎದುರಿಸುತ್ತಿರುವ ಕೊರತೆಯನ್ನು ತಗ್ಗಿಸಲಿದೆ. ಇದೀಗ ಕೊರೊನಾ ಲಸಿಕೆಗಾಗಿ ಭಾರೀ ಪ್ರಮಾಣದ ಬೇಡಿಕೆ ಇದ್ದು, ಜನ ಕಿಲೋಮೀಟರ್ಗಟ್ಟಲೇ ಸರತಿಯಲ್ಲಿ ನಿಂತು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಲಸಿಕೆ ಕೊರತೆ ಮಾತ್ರ ಕಾಡುತ್ತಿದೆ. ಹೀಗಾಗಿ ಲಸಿಕೆ ಲಭ್ಯತೆ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿದ್ದು, ಜೂನ್ ನಲ್ಲಿ 12 ಕೋಟಿ ಡೋಸ್ ಲಸಿಕೆ ಸಿಗಲಿದೆ ಎಂದು ಹೇಳಿದೆ. ಇದನ್ನೂ ಓದಿ: ಇಂದು 20,378 ಹೊಸ ಕೊರೊನಾ ಪ್ರಕರಣ – ಪಾಸಿಟಿವಿಟಿ ರೇಟ್ ಶೇ.14.68
Advertisement
Advertisement
ಈ ವರೆಗೆ 18-44 ವರ್ಷ ವಯಸ್ಸಿನ 14.15 ಲಕ್ಷ ಜನ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶನಿವಾರ ಒಂದೇ ದಿನ 18-44 ವರ್ಷದ 9,075 ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟಾರೆಯಾಗಿ ಕೊರೊನಾ ಲಸಿಕೆಯ 3ನೇ ಹಂತ ಆರಾಂಭವಾದಾಗಿನಿಂದ ದೇಶಾದ್ಯಂತ 1.82 ಕೋಟಿ ಜನ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.
Advertisement
ಬಿಹಾರ, ದೆಹಲಿ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ 18-44 ವರ್ಷದೊಳಗಿನ 10 ಲಕ್ಷಕ್ಕೂ ಅಧಿಕ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಶನಿವಾರದ ವರೆಗೆ ದೇಶದಲ್ಲಿ 21.18 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಒಟ್ಟು 21.18 ಕೋಟಿ ಡೋಸ್ ಲಸಿಕೆ ಪೈಕಿ, 98.61 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದು, 67.71 ಲಕ್ಷ ಜನ ಆರೋಗ್ಯ ಕಾರ್ಯಕರ್ತರು 2ನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 1.55 ಕೋಟಿ ಜನ ಫ್ರಂಟ್ಲೈನ್ ವಾರಿಯರ್ಸ್ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 84.87 ಲಕ್ಷ ಜನ ಫ್ರಂಟ್ ಲೈನ್ ವಾರಿಯರ್ಸ್ 2ನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ.
ಒಟ್ಟು 18-44 ವರ್ಷದ 1.82 ಕೋಟಿ ಹಾಗೂ 9,373 ಜನ ಕ್ರಮವಾಗಿ ಮೊದಲ ಹಾಗೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 45-60 ವರ್ಷದ 6.53 ಕೋಟಿ ಹಾಗೂ 1.05 ಕೋಟಿ ಜನ ಕ್ರಮವಾಗಿ ಮೊದಲ ಹಾಗೂ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 5.84 ಕೋಟಿ ಹಾಗೂ 1.86 ಕೋಟಿ ಜನರು ಕ್ರಮವಾಗಿ ಮೊದಲ ಹಾಗೂ 2ನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.