ಬೆಂಗಳೂರು: ಮೇಘನಾ ರಾಜ್ ಮುದ್ದು ಕಂದಮ್ಮನಿಗೆ 4 ತಿಂಗಳು ಪೂರ್ಣಗೊಂಡಿದೆ. ಈ ಸಂತೋಷವನ್ನು ಮೇಘನಾರಾಜ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಗನ ಫೋಟೋ ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ನಾಲ್ಕು ತಿಂಗಳ ಪರಿಪೂರ್ಣ ಸಂತೋಷ ಮತ್ತು ನಿದ್ದೆಯಿಲ್ಲದ ರಾತ್ರಿಗಳು.. ನನ್ನ ಯುವರಾಜ ಎಂದು ಬರೆದುಕೊಂಡು ಫೋಟೋವನ್ನು ಹಂಚಿಕೊಂಡಿದ್ದಾರೆ. ಜೂನಿಯರ್ ಸರ್ಜಾನಿಗೆ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಜ್ಯೂನಿಯರ್ ಚಿರು ಹೇಗಿದ್ದಾನೆ ಎಂಬ ಅಭಿಮಾನಿಗಳ ಕಾತರದ ಪ್ರಶ್ನೆಗೆ ಪ್ರೇಮಿಗಳ ದಿನಾಚರಣೆಯಂದು ನಟಿ ಮೇಘನಾ ಸರ್ಜಾ ಫೋಟೋ ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದರು.
View this post on Instagram
ಇತ್ತೀಚೆಗೆ ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾತಾರ್ಂಡದ ಟ್ರೈಲರ್‍ನನ್ನು ಚಿರು ಮುದ್ದು ಮಗ ಜೂನಿಯರ್ ಚಿರು ಲಾಂಚ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಪುಟ್ಟದಾದ ಮುದ್ದು ಕೈಬೆರಳುಗಳಿಂದ ಅಪ್ಪನ ಸಿನಿಮಾದ ರಾಜಮಾತಾರ್ಂಡ ಸಿನಿಮಾದ ಟ್ರೈಲರ್‍ನ ವೀಡಿಯೋ ಪ್ಲೇ ಮಾಡುತ್ತಿರುವ ವೀಡಿಯೋವನ್ನು ಮೇಘನಾರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಮೇಘನಾ ತಮ್ಮ ಖಾಸಗಿ ಜೀವನದ ಸುದ್ದಿಗಳ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ಮೂಲಕವಾಗಿ ನೀಡುತ್ತಿರುತ್ತಾರೆ.