– ಹೋಗಲು ಒಪ್ಪದಿದ್ದಾಗ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿದ!
ಪಾಟ್ನಾ: ಬಿಹಾರದ ಭಗಲ್ಪುರದ ಹಸನಗಂಜ್ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯೋರ್ವ ಪತ್ನಿಯನ್ನ ಜೂಜಾಟದಲ್ಲಿ ಸೋತು ಬೇರೊಬ್ಬನ ಜೊತೆ ಹೋಗು ಅಂದಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಪತ್ನಿಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿದ್ದಾನೆ.
ನವೆಂಬರ್ 2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂಜಾಟದಲ್ಲಿ ಸೋತಿದ್ದಕ್ಕೆ ಪತ್ನಿಯನ್ನ ಗೆದ್ದವರ ವಶಕ್ಕೆ ನೀಡಿದ್ದನು. ಆದ್ರೆ ಪತ್ನಿ ಪರ ಪುರುಷರ ಜೊತೆ ಹೋಗಲು ಒಪ್ಪದಿದ್ದಾಗ ಗುಪ್ತಾಂಗ ಮತ್ತು ದೇಹದ ಮೇಲೆ ಆ್ಯಸಿಡ್ ಹಾಕಿದ್ದಾನೆ. ನಂತರ ಪತ್ನಿಯನ್ನ ಕೊಠಡಿಯಲ್ಲಿ ಬಂಧಿಸಿ ಇರಿಸಿದ್ದನು.
ಕಳೆದ ರಾತ್ರಿ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಲೋಧಿಪುರ ಗ್ರಾಮ ತಲುಪಿ, ಅಲ್ಲಿಯವರ ಸಹಾಯ ಪಡದು ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಲೋಧಿಪುರಕ್ಕೆ ಆಗಮಿಸಿದ ಮಹಿಳೆಯ ಪೋಷಕರು ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
10 ವರ್ಷಗಳ ಹಿಂದೆ ಮಹಿಳೆಯ ಮದುವೆ ಆಗಿತ್ತು. ಮಕ್ಕಳು ಆಗದಕ್ಕೆ ಮಹಿಳೆಗೆ ಪತಿ ಕಿರುಕುಳ ನೀಡುತ್ತಿದ್ದನು. ಮಕ್ಕಳಾಗದಕ್ಕೆ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿದ್ದಾನೆ. ಸದ್ಯ ಮಹಿಳೆಗೆ ಮಾಯಾಗಂಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಮಹಿಳೆ ಕುಟುಂಬಸ್ಥರು ಇದುವರೆಗೂ ದೂರು ದಾಖಲಿಸಿಲ್ಲ.