– ಅನ್‍ಲಾಕ್ 2 ಮಾರ್ಗಸೂಚಿ ಪ್ರಕಟ, ಅನ್‍ಲಾಕ್ 1ಗಿಂತ ಭಿನ್ನವಾಗಿಲ್ಲ
ನವದೆಹಲಿ: ಕೇಂದ್ರ ಸರ್ಕಾರ ಅನ್‍ಲಾಕ್-2 ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 31ರ ವರೆಗೆ ಶಾಲಾ, ಕಾಲೇಜು, ತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ.
ಅನ್‍ಲಾಕ್-1 ಜೂನ್ 30ಕ್ಕೆ ಕೊನೆಗೊಳ್ಳುವ ಹಿನ್ನೆಲೆ ಇಂದು ಅನ್‍ಲಾಕ್-2 ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮೆಟ್ರೋ ರೈಲು, ಸಿನಿಮಾ ಥೀಯೇಟರ್‍ಗಳು, ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್, ಎಂಟರ್‍ಟೈನ್ಮೆಂಟ್ ಪಾರ್ಕ್‍ಗಳು, ಬಾರ್, ಸಭಾ ಭವನಗಳು ಹಾಗೂ ಹೆಚ್ಚು ಜನ ಸೇರುವ ಪ್ರದೇಶಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Advertisement
#UNLOCK2: Social/ political/ sports/ entertainment/ academic/ cultural/ religious functions & other large congregations remain prohibited. pic.twitter.com/0b8WaSW2FI
— ANI (@ANI) June 29, 2020
Advertisement
ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ದೊಡ್ಡ ಸಮಾರಂಭಗಳನ್ನು ಆಯೋಜಿಸುವಂತಿಲ್ಲ ಎಂದು ತಿಳಿಸಿದೆ. ಶಾಲಾ ಕಾಲೇಜುಗಳು ತೆರೆಯುವಂತಿಲ್ಲ.
1. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯಯವಾಗಿ ಮಾಸ್ಕ್ ಧರಿಸುವುದು ಮತ್ತು 6 ಅಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
2. ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ. ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ.
3. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ದಂಡ
4. ವರ್ಕ್ ಫ್ರಂ ಹೋಮ್ ಗೆ ಮೊದಲ ಆದ್ಯತೆ ನೀಡುವುದು. ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕಂಪನಿಗಳು ನೋಡಿಕೊಳ್ಳತಕ್ಕದ್ದು.
5. ಕೆಲಸದ ಸ್ಥಳ, ಮಾರುಕಟ್ಟೆ, ಮಾಲ್, ಧಾರ್ಮಿಕ ಕೇಂದ್ರಗಳ ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದು.
Advertisement
#UNLOCK2: Schools, colleges, educational & coaching institutions, International flights, metro rail, cinemas, gyms, pools, religious gatherings among others to remain prohibited till July 31st. pic.twitter.com/HdFZTKKrcx
— ANI (@ANI) June 29, 2020