– ಸೋಂಕಿತರಿಗೆ ಕೇರ್ ಸೆಂಟರ್ ನಿಂದಲೇ ವ್ಯವಸ್ಥೆ
– ಪರೀಕ್ಷಾ ಸಿಬ್ಬಂದಿಗೂ ಸೂಚನೆ
ಬೆಂಗಳೂರು: ಕೊರೊನಾ ಆರ್ಭಟ ತಗ್ಗಿರೋ ಬೆನ್ನಲ್ಲೇ ರಾಜ್ಯ ಸರ್ಕಾರ ಕೊನೆಗೂ 10ನೇ ತರಗತಿ ಪರೀಕ್ಷೆ ಜುಲೈ 19ಕ್ಕೆ ಡೇಟ್ ಫಿಕ್ಸ್ ಮಾಡಿದೆ. ಈ ಮೂಲಕ ವಿದ್ಯಾರ್ಥಿಗಳ ಟರ್ನಿಂಗ್ ಪಾಯಿಂಟ್ ಆಗಿರೋ ಎಸ್‍ಎಸ್‍ಎಲ್‍ಸಿಗೆ ಮಕ್ಕಳು ಪರೀಕ್ಷೆ ಬರೆಯಬೇಕಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಎಲ್ಲಾ ಡಿಸಿಗಳು, ಸಿಇಓಗಳು, ಎಸ್‍ಪಿಗಳುಗಳ ಸುದೀರ್ಘ ವಿಡಿಯೋ ಸಂವಾದ ನಡೆಸಿದ್ರು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸುರೇಶ್ ಕುಮಾರ್ ಜೊತೆಗಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಜೊತೆ ಚರ್ಚಿಸಿ, ಅವರು ಕೊಟ್ಟ ಎಸ್‍ಓಪಿ ಅನುಸಾರ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಎಸ್‍ಎಸ್‍ಎಲ್ ಸಿ ಪರೀಕ್ಷೆ ಯಾರನ್ನು ಫೇಲ್ ಮಾಡಲ್ಲ ಅಂತ ಪುನರುಚ್ಛರಿಸಿದ ಸಚಿವರು, ಜುಲೈ ತಿಂಗಳಲ್ಲಿ ಸರಳವಾಗಿ ಪರೀಕ್ಷೆ ನಡೆಸ್ತಿದ್ದೇವೆ. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಿತ ಕೇಂದ್ರಗಳಾಗಿ ಇರ್ತವೆ ಅಂತ ಜಿಲ್ಲಾಧಿಕಾರಿಗಳು ವಿಶ್ವಾಸ ಮೂಡಿಸಿದ್ದಾರೆ ಅಂತ ತಿಳಿಸಿದ್ರು. ಇದನ್ನೂ ಓದಿ: ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ
Advertisement
Advertisement
10ನೇ ತರಗತಿ ಪರೀಕ್ಷೆ ದಿನಾಂಕ ಮತ್ತು ಶಿಕ್ಷಣ ಇಲಾಖೆ ವಹಿಸಿರೋ ಮುನ್ನೆಚ್ಚರಿಕಾ ಕ್ರಮಗಳು:
* ಜುಲೈ 19 & ಜುಲೈ 22ಕ್ಕೆ 2 ದಿನ ಪರೀಕ್ಷೆ
* ಜುಲೈ 19 – ಗಣಿತ, ವಿಜ್ಞಾನ, ಸಮಾಜ ವಿಜ್ಞಾನ (ಕೋರ್ ಸಬ್ಜೆಕ್ಟ್)
* ಜುಲೈ 22 – ಕನ್ನಡ, ಹಿಂದಿ, ಇಂಗ್ಲಿಷ್ (ಲಾಂಗ್ವೇಜ್ ಸಬ್ಜೆಕ್ಟ್)
* ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಸಮಯ ನಿಗದಿ
* ವಿದ್ಯಾರ್ಥಿಗಳು ಬೆಳಗ್ಗೆ 8.00 ಗಂಟೆಗೆ ಎಕ್ಸಾಂ ಹಾಲ್‍ಗೆ ಬರಬಹುದು (ರಸ್ತೆಯಲ್ಲಿ ಕೂತು ಓದುವ ಬದಲು ಕೊಠಡಿಯಲ್ಲಿ ಕೂರಬಹುದು)
* ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ (ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆ ಬೋರ್ಡ್ ವೆಬ್‍ಸೈಟ್‍ನಲ್ಲಿದೆ)
* ಈಗಾಗಲೇ ಮುಗಿದಿರುವ ಶೇ.70 ಸಿಲಬಸ್‍ನಲ್ಲಿ ಮಾತ್ರ ಪ್ರಶ್ನೆ ಇರುತ್ತೆ
* ಪರೀಕ್ಷೆ ನಿಗದಿಯಾಗಿದ್ದರೂ ಯಾರೊಬ್ಬರೂ ಫೇಲ್ ಇಲ್ಲ
Advertisement
Advertisement
* ಓಎಂಆರ್ ಶೀಟ್‍ನಲ್ಲಿ ಉತ್ತರ ಬರೆಯಬೇಕು
* ಊರಿಗೆ ಹೋಗಿರೋ ವಿದ್ಯಾರ್ಥಿಗಳಿಗೆ ಮನೆ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆಗೆ ಅವಕಾಶ
* ಕೋವಿಡ್ ಲಕ್ಷಣ ಇರೋ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ
* ಸೋಂಕಿತ ವಿದ್ಯಾರ್ಥಿಗಳಿಗೆ ಸ್ಥಳೀಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ಪರೀಕ್ಷೆ
* ಪರೀಕ್ಷೆ ಬರೆಯಲು ಆಗದವರಿಗೆ ಪೂರಕ ಪರೀಕ್ಷೆಯಲ್ಲಿ ಫ್ರೆಶ್ ವಿದ್ಯಾರ್ಥಿಗಳಂತೆಯೇ ಅವಕಾಶ
* ರಿಪೀಟರ್ಸ್‍ಗಳ ಬಗ್ಗೆ 2-3 ದಿನದಲ್ಲಿ ಅಂತಿಮ ನಿರ್ಧಾರ
* ನಾಳೆಯೇ ಮಕ್ಕಳ ಪ್ರವೇಶ ಪತ್ರ ಶಾಲಾ ಮುಖ್ಯಸ್ಥರ ಅಕೌಂಟ್‍ಗೆ ಹೋಗುತ್ತೆ
* 8,76,581 ವಿದ್ಯಾರ್ಥಿಗಳು, 73,066 ಪರೀಕ್ಷಾ ಕೊಠಡಿಗಳು
* ಡೆಸ್ಕ್ ಗೆ ಒಬ್ಬರಂತೆ 1 ಕೊಠಡಿಗೆ 12 ವಿದ್ಯಾರ್ಥಿಗಳು ಮಾತ್ರ
ಪರೀಕ್ಷಾ ಸಿಬ್ಬಂದಿಗೇನು ಸೂಚನೆ..?
* ಆರೋಗ್ಯ ವ್ಯತ್ಯಾಸ ಇರೋ ಪರೀಕ್ಷಾ ಸಿಬ್ಬಂದಿ ಕೆಲಸಕ್ಕೆ ಬರುವಂತಿಲ್ಲ
* 18+ ಮೇಲ್ಪಟ್ಟ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ 1 ವಾರದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು
* ಶಿಕ್ಷಕರಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲು ಆರೋಗ್ಯ ಇಲಾಖೆಗೆ ಸೂಚನೆ
* ಪರೀಕ್ಷಾ ಕೇಂದ್ರಗಳಿಗೆ ಬೆಳಗ್ಗೆ 9.30ಕ್ಕೆ ಹಾಜರಿರಬೇಕು
* ಸಿಬ್ಬಂದಿ ಎನ್-95 ಮಾಸ್ಕ್, ಫೇಸ್ ಶೀಲ್ಡ್ ಹಾಕಬೇಕು
* ಮಕ್ಕಳ ಎಂಟ್ರಿ, ಎಕ್ಸಿಟ್ 2 ಬಾರಿ ಸ್ಯಾನಿಟೈಸ್ ಮಾಡಿಸಬೇಕು
* ಪ್ರತಿ ಕೇಂದ್ರದಲ್ಲಿ ಹೆಲ್ತ್ ಕ್ಯಾಂಪ್ ಇರುತ್ತೆ (ಆಶಾ ಕಾರ್ಯಕರ್ತೆಯರು ಅಥವಾ ಪ್ಯಾರಾ ಮೆಡಿಕಲ್ ಸ್ಟಾಫ್ ಇರ್ತಾರೆ)
* ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಯಲ್ಲಿ ಕ್ರಮಕ್ಕೆ ಡಿಸಿಗಳಿಗೆ ಸೂಚನೆ
ಇತ್ತ ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ಲೇ ಜುಲೈ 2ನೇ ವಾರದೊಳಗೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸೋದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಯಾವ ಮಕ್ಕಳಿಗೂ ಅನ್ಯಾಯ ಅಗದ ರೀತಿಯಲ್ಲಿ ಫಲಿತಾಂಶ ಪ್ರಕಟ ಆಗುತ್ತೆ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದ್ದು, ಹೇಗೆ ಮೌಲ್ಯಮಾಪನ ಮಾಡಬೇಕು ಅಂತ ಸಲಹೆ ಕೊಟ್ಟಿದ್ದಾರೆ. ಇದರ ಆಧಾರದಲ್ಲಿ ಮೌಲ್ಯಮಾಪನ ಆಗತ್ತೆ. ಒಂದೊಮ್ಮೆ ಅಂಕ ಕಡಿಮೆ ಅಂತ ಅನ್ನಿಸೋ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತೆ ಅಂತ ಸಚಿವರು ವಿವರಿಸಿದ್ರು.